ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ ಕಡುಬಡವ ಸುರೇಶ್ ಯುವಕ ಇತ್ತೀಚೆಗಷ್ಟೇ ತನ್ನ ನೆಚ್ಚಿನ ಹೀರೋ ಪ್ರಭಾಸ್ ನಟನೆಯ ಸಾಹೊ ಚಿತ್ರವನ್ನು ನೋಡಲು ಟಿಕೆಟ್ ಇಲ್ಲದೆ ಪಿವಿಆರ್ ಗೆ ನುಗ್ಗಲು ಪ್ರಯತ್ನಿಸಿದ್ದಾನೆ. ಇನ್ನು ಸುರೇಶ್ ನನ್ನು ಪಿವಿಆರ್ ಸಿಬ್ಬಂದಿ ಹಿಡಿದು ಆಡುಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿಲೀಪ್ ಅವರಿಗೆ ಒಪ್ಪಿಸಿದ್ದಾರೆ.
ಸುರೇಶ್ ನನ್ನು ಬಂಧಿಸಿ ಠಾಣೆಗೆ ಕರೆಸಿಕೊಂಡ ದಿಲೀಪ್ ಅವರು ಆತನ ಹಿನ್ನೆಲೆಯನ್ನು ವಿಚಾರಿಸಿದ್ದಾರೆ. ಈ ವೇಳೆ ಸುರೇಶ್ ನಾನೊಬ್ಬ ಬಡವ ಕೆಲಸ ಹರಸಿಕೊಂಡು ಬೆಂಗಳೂರಿಗೆ ಬಂದೆ ಆದರೆ ಸರಿಯಾದ ಕೆಲಸ ಸಿಗುತ್ತಿಲ್ಲ ದುಡ್ಡಿಲ್ಲ ಹೀಗಾಗಿ ನನ್ನ ನೆಚ್ಚಿನ ಹೀರೋ ಸಿನಿಮಾ ನೋಡಲು ಕತ್ತು ಹೋದೆ ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ. ಸುರೇಶ್ ಪರಿಸ್ಥಿತಿ ಕಂಡು ಮರುಗಿದ ಇನ್ಸ್ಪೆಕ್ಟರ್ ದಿಲೀಪ್ ಅವರು ಅವರ ಠಾಣೆಯಲ್ಲಿಯೇ ಹೌಸ್ ಕೀಪಿಂಗ್ ಕೆಲಸ ಮತ್ತು ಸಮೀಪದಲ್ಲಿಯೇ ಇರುವ ಒಂದು ಹೋಟೆಲ್ ನಲ್ಲಿ ಕೆಲಸವನ್ನು ಆತನಿಗೆ ಕೊಡಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಸ್ವಂತ ದುಡ್ಡಿನಲ್ಲಿ ಆತನಿಗೆ ಒಳ್ಳೆಯ ಬಟ್ಟೆಗಳನ್ನು ಸಹ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.