ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ ನಾನು ಕನಕಪುರದ ಮೊಮ್ಮಗ.ನಾವು ಕೆಂಪೇಗೌಡರ ಮಗ ಅಂತೀರಲ್ಲ ಹಾಗೇ ಕಾಳೇಗೌಡರ ಮೊಮ್ಮಗ ನಾನು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರವರಿಗೆ ಕಾಳಿ ಮಠದ ರಿಷಿ ಕುಮಾರಸ್ವಮೀಜಿ ಟಾಂಗ್ ನೀಡಿದರು. ಕೆಲ ದಿನಗಳ ಹಿಂದೆ ಕಪಾಲ ಬೆಟ್ಟಕ್ಕೆ ಬೇಟಿ ನೀಡಿ ಎಸು ಪ್ರತಿಮೆ ನಿರ್ಮಾಣಕ್ಕೆ ವಿರೋದ ವ್ಯಕ್ತಪಡಿಸಿದ್ದ ರಿಷಿ ಕುಮಾರ ಸ್ವಾಮಿಜಿ, ಕಪಾಲ ಬೆಟ್ಟದ ಮೇಲೆ ಪ್ರತಿಮೆ ನಿರ್ಮಾಣಕ್ಕೆ ದಾಸ್ತಾನು ಮಾಡಿರುವ ಕಲ್ಲಿನ ದಿಮ್ಮಿಗಳನ್ನು ಜಿಲ್ಲಾಢಳಿತ ವಶಪಡಿಸಿಕೊಳ್ಳಬೇಕೆಂದು ಅಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದರು.
ಕಾಳಿ ಮಠಕ್ಕೂ ಕನಕಪುರಕ್ಕೂ ಎನು ಸಂಭಂದ ಎಂದು ಡಿ.ಕೆ.ಶಿವಕುಮಾರ್ ರವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಹೆದರಿಸಬೇಡಿ ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ, ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ, ನಮ್ಮದೂ ರಾಮನಗರನೇ, ಕರ್ನಾಟಕದವರೇ, ಯಾವುದೋ ಬೆಟ್ಟನಾ,ಇಂತಹ ಎಷ್ಟೋ ಬೆಟ್ಟಗಳನ್ನ ಹೊಡೆದಿರುವಂತಹವರೆಲ್ಲ ಬೆಟ್ಟದ ಮೇಲೆ ಇನ್ನೊಂದು ಇಡುವುದಕ್ಕೆ ಹೋಗ್ತಾ ಇದ್ದೀರಾ, ನಾವು ಬಿಡುವುದಿಲ್ಲ, ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪ ಪ್ರಚಾರ ಮತ್ತು ದೂರಿನ ಮೂಲಕ ಹೆದರಿಸಲು ನೋಡ್ತಿದ್ದೀರಿ ಇದಕ್ಕೆಲ್ಲ ನಾವು ಹೆದರುವವರಲ್ಲ
ರಿಷಿ ಕುಮಾರಸ್ವಾಮೀಜಿ ಮೊದಲಿನಂತಿಲ್ಲ, ಹೆದರಿಸಬೇಡಿ ಎಂದು ಡಿಕೆಶಿ ಹೆಸರೇಳದೆ ಹರಿಹಾಯ್ದರು.