ಕನ್ನಡದಲ್ಲೀಗ ರ್ಯಾಪರ್ ಗಳ ದರ್ಬಾರ್ ಶುರುವಾಗಿದೆ. ರ್ಯಾಪರ್ ಚಂದನ್ ಶೆಟ್ಟಿ ಜನರ ಮನಸ್ಸಲ್ಲಿ ನೆಲೆಯೂರಿ, ಬಿಗ್ ಬಾಸ್ ಕಿರೀಟವನ್ನೂ ಧರಿಸಿ. ಸ್ಟಾರ್ ಗಳ ಪಟ್ಟಿ ಸೇರಿದ್ದಾರೆ. ಆಲ್.ಓಕೆ ,ರಾಹುಲ್ ದಿಟೋ ಹೀಗೆ ಅನೇಕ ಯುವ ರ್ಯಾಪರ್ ಗಳು ಯುವ ಮನಸ್ಸುಗಳಲ್ಲಿ ರ್ಯಾಪ್ ಸೌಂಡ್ ಮಾಡ್ತಿದ್ದಾರೆ. ಇಂಥಾ ರ್ಯಾಪರ್ ಗಳಲ್ಲೀಗ ಸ್ಟಾರ್ ಪಟ್ಟಕ್ಕೇರೋ ಎಲ್ಲಾ ಲಕ್ಷಣಗಳು ಯುವ ರ್ಯಾಪರ್ ರೋಹಿತ್ ಅಲಿಯಾಸ್ ರ್ಯಾಪರ್ ಆರ್ ಒ ಅವರಲ್ಲಿ ಕಾಣುತ್ತಿದೆ.
ರ್ಯಾಪರ್ ಆರ್ ಒ (ರೋಹಿತ್) ಅವರ ರ್ಯಾಪ್ ಸಾಂಗ್ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ರೋಹಿತ್ ರ್ಯಾಪ್ ಮತ್ತು ಪರ್ಫಾರ್ಮ್ ಮಾಡಿರೋ Rolls Royce Beda ನಮ್ಗೆ ಅನ್ನೋ ರ್ಯಾಪ್ ಸಾಂಗ್ ಹಿಟ್ ಆಗಿದೆ. ನಮ್ಗೆ ಖುಷಿಯಾಗಿರೋ ರೋಲ್ಸ್ ರಾಯ್ ಬೇಡ. ಧೈರ್ಯದಿಂದ ಮುನ್ನುಗ್ಗು, ನಮ್ಗೆ ಯಾರೋ ಹಂಗಿಲ್ಲ. ಸ್ನೇಹದ ಹೆಸರಲ್ಲಿ ನಮ್ಗೆ ದುಷ್ಮನ್ ಗಳು ಊರೆಲ್ಲ ಅನ್ನೋ ಹಾಡು ಭಾರೀ ಸದ್ದು ಮಾಡುತ್ತಿದೆ.
ಈ ರ್ಯಾಪ್ ಸಾಂಗ್ ಗೆ ಮೃತ್ಯುಂಜಯ್ ಎಂ.ಜೆ ನಿರ್ದೇಶನ ಮತ್ತು ಸಿನಿಮಾಟೋಗ್ರಫಿ ಮಾಡಿದ್ದಾರೆ. ಡಿ.ಜೆ ಲೇತಾಲ್ ಮ್ಯೂಸಿಕ್ ನೀಡಿದ್ದಾರೆ. ಜಿ.ಕೆ ಯೋಗೇಶ್ ಕೊರಿಯಾಗ್ರಫಿ ಮಾಡಿದ್ದಾರೆ. ದೀಪಕ್ ಪ್ರಕಾಶ್ ನಿರ್ಮಾಣದ ಜವಬ್ದಾರಿ ನಿರ್ವಹಿಸಿದ್ದಾರೆ.
2017ರಲ್ಲಿ ಅಮ್ಮ ನೀನು ದೇವರು ಅನ್ನೋ ರ್ಯಾಪ್ ಸಾಂಗ್ ಮಾಡಿದ್ದರು ರ್ಯಾಪರ್ ಆರ್ ಒ ಅಲಿಯಾಸ್ ರೋಹಿತ್. ಅವರೀಗ ರೋಲ್ಸ್ ರಾಯ್ ಬೇಡ ಅನ್ನೋ ರ್ಯಾಪ್ ಮೂಲಕ ಮಿಂಚುತ್ತಿದ್ದಾರೆ. ಈ ಹಾಡು ವೈರಲ್ ಆಗುತ್ತಿದ್ದಂತೆ ಗೂಗಲ್, ಯೂಟ್ಯೂಬ್ನಲ್ಲಿ ರೋಹಿತ್ . ರ್ಯಾಪರ್ ಆರ್ ಒ ಎಂದು ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವು ಈ ರ್ಯಾಪ್ ಇನ್ನೂ ನೋಡಿಲ್ಲ ಎಂದಾದರೆ ಈಗಲೇ ನೋಡಿ.
ಕನ್ನಡದಲ್ಲಿ ಸದ್ದಿಲ್ಲದೆ ಸುದ್ದಿಯಾಗದೆ ಸದ್ದು ಮಾಡ್ತಿರೋ ರ್ಯಾಪರ್ ರೋಹಿತ್..!
Date: