ಕನ್ನಡದ ಈ ಟಾಪ್ ನಟಿ ಆಗಾಗ ಮುಖ ಮುಚ್ಚಿಕೊಂಡು ಬೆಂಗಳೂರು ಸುತ್ತೋಕೆ ಇದೇ ಕಾರಣ..!

Date:

ಸೆಲೆಬ್ರಿಟಿಗಳ ಜೀವನವೇ ಹಾಗೆ, ಸಾಮಾನ್ಯರಂತೆ ರಸ್ತೆಗಳಲ್ಲಿ ಓಡಾಡಲು ಆಗುವುದಿಲ್ಲ, ಇಷ್ಟದ ಸ್ಥಳಗಳನ್ನು ಸರಿಯಾಗಿ ವೀಕ್ಷಿಸಲು ಆಗುವುದಿಲ್ಲ.. ತಮ್ಮ ಇಷ್ಟದ ಸ್ಥಳಕ್ಕೆ ಸಾಮಾನ್ಯವಾಗಿ ಹೋದರೆ ಸಾಕು ಅಭಿಮಾನಿಗಳು ಮುಗಿ ಬೀಳುತ್ತಾರೆ, ಅಭಿಮಾನಿಗಳ ಗುಂಪು ಸೇರಿದಾಗ ತಾವು ಸಾಮಾನ್ಯರಂತೆ ಹೊರಗೆ ಓಡಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲ ನಟ ಮತ್ತು ನಟಿಯರು ಮುಖಕ್ಕೆ ಬಟ್ಟೆ ಹಾಕಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಾರೆ.

 

ಇದಕ್ಕೆ ಪ್ರಸ್ತುತವಾಗಿ ಉದಾಹರಣೆ ಯಾಗಿರುವುದು ಕನ್ನಡದ ಟಾಪ್ ನಟಿ ರಚಿತಾ ರಾಮ್.. ಹೌದು ರಚಿತಾ ರಾಮ್ ಅವರು ಇತ್ತೀಚೆಗೆ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಿದರು. ಹೌದು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ವೀರಂ ಸಿನಿಮಾಗೋಸ್ಕರ ನಟಿ ರಚಿತಾರಾಮ ಸಾಮಾನ್ಯ ಜನರಂತೆ ಶಾಪಿಂಗ್ ಮಾಡಿದ್ದರು.

 

ಇನ್ನು ರಚಿತಾರಾಮ್ ಅವರು ಈ ರೀತಿ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬೆಂಗಳೂರಿನಲ್ಲಿ ಓಡಾಡಿದ್ದು  ಇದೇ ಮೊದಲೇನಲ್ಲ.. ಈ  ಹಿಂದೆ ಅವರು ಬೆಂಗಳೂರಿನ ನಮ್ಮ ಮೆಟ್ರೋ ದಲ್ಲಿಯೂ ಸಹ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಪ್ರಯಾಣ ಮಾಡಿದ್ದರು. ಮೆಟ್ರೋದಲ್ಲಿ ಹೋಗುವ ಆಸೆ ಹೊಂದಿದ್ದ ರಚಿತಾ ರಾಮ್ ಯಾರಿಗೂ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಮುಖಕ್ಕೆ ಬಟ್ಟೆಯನ್ನು ಧರಿಸಿ ಸಾಮಾನ್ಯ ಯುವತಿಯಂತೆ ಮೆಟ್ರೋದಲ್ಲಿ ಪ್ರಯಾಣ ಮಡಿ ಖುಷಿಪಟ್ಟಿದ್ದರು.

ರಚಿತಾ ಈರೀತಿ ಮುಖಕ್ಕೆ ಬಟ್ಟೆಯನ್ನು ಧರಿಸಿ ಬೆಂಗಳೂರು ಸುತ್ತುವುದು ಯಾರು ಸಹ ತಮ್ಮನ್ನು ಗುರುತು ಹಿಡಿಯಬಾರದು, ಸಾರ್ವಜನಿಕರಿಗೆ ತೊಂದರೆ ಆಗಬಾರದು ಮತ್ತು ತಾವು ಸಹ ಸ್ವತಂತ್ರವಾಗಿ ಸಾಮಾನ್ಯರಂತೆ ಇರಬೇಕು ಎಂಬ ಕಾರಣಕ್ಕೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...