ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ, ಕನ್ನಡ ಚಿತ್ರಗಳು ಅಷ್ಟೇನು ಸದ್ದು ಮಾಡುವುದಿಲ್ಲ ಎಂಬ ಕಾಲವೊಂದಿತ್ತು.. ಆದರೆ ಇದೀಗ ಆ ಮಾತುಗಳು ಬದಲಾಗಿವೆ, ಕನ್ನಡ ಚಿತ್ರಗಳೆಂದರೆ ಬಹುದೊಡ್ಡ ಬೇಡಿಕೆ ಮತ್ತು ಮಾರುಕಟ್ಟೆ ಇದೆ. ಇದೀಗ ಯುವರತ್ನ ಚಿತ್ರ ಕನ್ನಡ ಚಿತ್ರಗಳಿಗೆ ಎಷ್ಟು ದೊಡ್ಡ ಮಾರುಕಟ್ಟೆ ಮತ್ತು ಬೇಡಿಕೆ ಇದೆ ಎಂಬುದನ್ನು ಸಾಬೀತು ಮಾಡಿದೆ.
ರಾಜಕುಮಾರ ದಂತಹ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ್ದ ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ ಯುವರತ್ನ. ಹೀಗಾಗಿ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.. ಟೀಸರ್ ಮತ್ತು ಹಾಡುಗಳಿಂದ ಈಗಾಗಲೇ ಎಲ್ಲರನ್ನೂ ಇಂಪ್ರೆಸ್ ಮಾಡಿರುವ ಯುವರತ್ನ ಏಪ್ರಿಲ್ ಒಂದನೇ ತಾರೀಕು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇನ್ನು ಇದೀಗ ಬಂದಿರುವ ಸುದ್ದಿಯ ಪ್ರಕಾರ ಯುವರತ್ನ ಚಿತ್ರವನ್ನು ಅಮೆಜಾನ್ ಪ್ರೈಮ್ ಖರೀದಿಸಿದೆ.. ಹೌದು ಅಮೆಜಾನ್ ಪ್ರೈಮ್ ಯುವರತ್ನ ಚಿತ್ರವನ್ನು ಖರೀದಿಸಿದ್ದು ಇದುವರೆಗೂ ಯಾವ ಕನ್ನಡ ಚಿತ್ರಕ್ಕೂ ಕೊಟ್ಟಿರದ ಹಣವನ್ನು ಯುವರತ್ನ ಚಿತ್ರಕ್ಕೆ ನೀಡಿ ಖರೀದಿಸಿದೆ ಎನ್ನಲಾಗುತ್ತಿದೆ.. ಹೌದು ಅತಿಹೆಚ್ಚು ಬೆಲೆಗೆ ಯುವರತ್ನ ಚಿತ್ರ ಅಮೆಜಾನ್ ಪ್ರೈಮ್ ಗೆ ಮಾರಾಟವಾಗುವ ಮೂಲಕ ಹೊಸದೊಂದು ದಾಖಲೆ ಬರೆದಿದೆ.
ಆದರೆ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಚಿತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ನಂತರ ಮಾತ್ರ ಪ್ರಸಾರವಾಗಲಿದೆ. ಹೌದು ಚಿತ್ರಮಂದಿರಗಳಿಂದ ಯುವರತ್ನ ಚಿತ್ರವನ್ನು ತೆರವುಗೊಳಿಸಿದ ನಂತರ ಅಮೆಜಾನ್ ಪ್ರೈಮ್ ನಲ್ಲಿ ಯುವರತ್ನ ಪ್ರಸಾರವಾಗಲಿದೆ..