ಕನ್ನಡಿಗರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು !

Date:

ಬೆಂಗಳೂರು: ಸಿಎಂ ಟ್ವೀಟ್ ಮಾಡ್ತಾರೆ ಅಮೇಲೆ ಡಿಲೀಟ್ ಮಾಡ್ತಾರೆ‌ ಅಂದ್ರೆ ಏನ್ ಅರ್ಥ ಕಲ್ಪಿಸುತ್ತೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸಿಎಂ ಟ್ವೀಟ್ ಮಾಡ್ತಾರೆ ಅಮೇಲೆ ಡಿಲೀಟ್ ಮಾಡ್ತಾರೆ‌ ಅಂದ್ರೆ ಏನ್ ಅರ್ಥ ಕಲ್ಪಿಸುತ್ತೆ. ಸದನದ ಒಳಗೆ ಮುಡಾ, ವಾಲ್ಮೀಕಿ ಹಗರಣದ ಚರ್ಚೆ ನಡೆಯುತ್ತಿದೆ. ವಿಷಯ ಡೈವರ್ಟ್ ಮಾಡಲು ಹೀಗೆ ಮಾಡಿಡ್ರಾ ಅನ್ನಿಸುತ್ತೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕನ್ನಡಿಗರ ಪರ ಸೂಕ್ತ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಇನ್ನೂ ವಾಲ್ಮೀಕಿ ಹಗರಣದಲ್ಲಿ ದಿನೇ ದಿನೇ ಹೊಸ ಅಂಶ ಹೊರಗೆ ಬರ್ತಿದೆ. SIT ಬಗ್ಗೆ ಸಿಎಂ, ಡಿಸಿಎಂ ಭಾಷಣ ಮಾಡ್ತಿದ್ರು. ಈಗ ಇಡಿ ಮಾಹಿತಿ ನೀಡಿದೆ ಚುನಾವಣೆಗೆ ಮದ್ಯ ಖರೀಗೆ ಹಣ ಬಳಕೆ ಆಗಿದೆ ಅಂತ. ವಾಲ್ಮೀಕಿ ಹಗರಣದ ವ್ಯಾಪ್ತಿ ವಿಸ್ತಾರ ಆಗ್ತಿದೆ. ಸಿಎಂ ಅವರು, ಮಾಜಿ ಮಂತ್ರಿಗಳು, ಶಾಸಕರ ರಕ್ಷಣೆ ಮಾಡೋ ಕೆಲಸ ಮಾಡಿದ್ದಾರೆ‌.
ಇದರ ವಿರುದ್ಧ ಹೋರಾಟ ಮುಂದುವರೆಸುತ್ತೇವೆ.ಇವತ್ತು ವಿಧಾನಸೌಧ ಮುತ್ತಿಗೆ ಹಾಕುತ್ತೇವೆ. ಸದನದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ.ಅಹಿಂದಾ ಅಹಿಂದಾ ಅಂತ ಸಿದ್ದರಾಮಯ್ಯ ಮಾತಾಡ್ತಾರೆ. ಅಹಿಂದಾ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಅಂತ ಹೇಳಿದ್ರು

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...