ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟೆಸ್ಟ್ ಸೇರಿ ಶುರುವಾಗಿದ್ದು ಮೊದಲನೇ ಟೆಸ್ಟ್ ವೈಜಾಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ರೋಹಿತ್ ಶರ್ಮಾ ಜೊತೆ ಕ್ರೀಸ್ ಗೆ ಬಂದ ಮಯಂಕ್ ಅಗರವಾಲ್ ಅವರು ಈ ದೊಡ್ಡ ಮಟ್ಟದಲ್ಲಿ ಬ್ಯಾಟ್ ಬೀಸಲಿದ್ದಾರೆ ಅಂತಹ ಯಾರೊಬ್ಬರೂ ಸಹ ಊಹೆ ಮಾಡಿರಲಿಲ್ಲ. 371 ಎಸೆತಗಳನ್ನು ಎದುರಿಸಿದ ಮಯಂಕ್ ಅಗರವಾಲ್ ಅವರು 215 ರನ್ ಬಾರಿಸಿ ದ್ವಿಶತಕ ಸಿಡಿಸಿದರು.
ಇನ್ನು ಮಯಾಂಕ್ ಅಗರ್ವಾಲ್ ಅವರ ಜಾಣ್ಮೆಯ ಆಟಕ್ಕೆ ದೊಡ್ಡ ದೊಡ್ಡ ಕ್ರಿಕೆಟ್ ಪಂಡಿತರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು , ಗಾಡ್ ಆಫ್ ಕ್ರಿಕೆಟ್ ಎಂದೇ ಹೆಸರು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ಸಹ ಟ್ವಿಟ್ಟರ್ ಮೂಲಕ ಮಯಾಂಕ್ ಅಗರ್ವಾಲ್ ಅವರ ಅದ್ಭುತ ಆಟವನ್ನು ಹಾಡಿ ಹೊಗಳಿದ್ದಾರೆ. ಒಂದೆಡೆ ದ್ವಿಶತಕ ಬಾರಿಸಿದ ಖುಷಿ ಮತ್ತೊಂದೆಡೆ ಸಚಿನ್ ರಂತಹ ದೊಡ್ಡ ಸಾಧಕರ ಬಾಯಿಂದ ಶುಭ ಹಾರೈಕೆ ನಿಜಕ್ಕೂ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರಿಗೆ ಈ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಜೀವಮಾನದ ಸಾಧನೆಯೇ ಸರಿ.