ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಣಾಹಣಿಗೆ ಕೆಲವೇ ಗಂಟೆಗಳಿರುವಾಗ ತೀವ್ರ ಹೊಟ್ಟನೋವಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರಾಹುಲ್ ಅಪೆಂಡಿಸಿಟಿಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ರಾಹುಲ್‌ಗೆ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು.
ಈಗ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸೋಮವಾರ ಈ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದ್ದು ಒಂದು ವಾರಗಳ ವಿಶ್ರಾಂತಿಯನ್ನು ರಾಹುಲ್‌ಗೆ ಸೂಚಿಸಲಾಗಿದೆ. ಹೀಗಾಗಿ ಕೆಎಲ್ ರಾಹುಲ್ ಸದ್ಯ ಪಂಜಾಬ್ ತಂಡದ ಬಯೋಬಬಲ್‌ನಿಂದ ಹೊರಗುಳಿದಿರುವ ಕಾರಣ ಒಂದು ವಾರಗಳ ಕಡ್ಡಾಯ ಕ್ವಾರಂಟೈನ್ ನಂತರ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.
ಕೆಎಲ್ ರಾಹುಲ್ ಕನಿಷ್ಠ ತೀವ್ರತೆಯ ಶಸ್ತ್ರಚಿಕಿತ್ಸೆಯಾದ ಲ್ಯಾಪರೊಸ್ಕೋಪಿಕ್ ಅಪೆಂಡೆಕ್ಟೊಮಿಗೆ ಒಳಗಾಗಿದ್ದಾರೆ. ಹೀಗಾಗಿ ಒಂದು ವಾರದ ವಿಶ್ರಾಂತಿಯ ನಂತರ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ ಎಂದು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕೆಎಲ್ ರಾಹುಲ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಯ ನಂತರ ಅಪೆಂಡಿಸಿಟಿಸ್‌ಗೆ ಸುತ್ತಾಗಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ತಕ್ಷಣವೇ ಅಹ್ಮದಾಬಾದ್‌ನಿಂದ ಚಾರ್ಟರ್ಡ್ ಫ್ಲೈಟ್ ಮೂಲಕ ಶಸ್ತ್ರಚಿಕಿತ್ಸೆಗಾಗಿ ಮುಂಬೈಗೆ ಕಳುಹಿಸಲಾಗಿತ್ತು. ಈಗ ಶಸ್ತ್ರ ಚಿಕಿತ್ಸೆ ಸಂಪೂರ್ಣವಾಗಿದ್ದು ವಿಶ್ರಾಂತಿಯ ನಂತರ ಕ್ವಾರಂಟೈನ್ ನಿಯಮಗಳನ್ನು ಪೂರೈಸು ಮತ್ತೆ ತಂಡವನ್ನು ಕೆಎಲ್ ರಾಹುಲ್ ಕೂಡಿಕೊಳ್ಳುವ ಸಾಧ್ಯತೆಯಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಅದ್ಭುತ ಜಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ವಿರುದ್ಧ ಪಡೆದುಕೊಂಡಿದೆ. ಪಂಜಾಬ್ ತಂಡದ ಈ ಗೆಲುವಿನಲ್ಲಿ ಪಂಜಾಬ್ ಮೂಲದ ಹರ್‌ಬ್ರೀತ್ ಬ್ರಾರ್ ಕೊಡುಗೆ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದು ಆರ್‌ಸಿಬಿಗೆ ಆಘಾತ ನೀಡಿದ ಹರ್‌ಪ್ರೀತ್ ಬ್ರಾರ್ ಪಾಲಿಗೆ ಐಪಿಎಲ್ ವರೆಗಿನ ಹಾದಿ ಸುಲಭದ್ದಾಗಿರಲಿಲ್ಲ.
1995 ಸೆಪ್ಟೆಂಬರ್ 15 ರಂದು ಪಂಜಾಬ್‌ನ ಮೋಗ ಜಿಲ್ಲೆಯಲ್ಲಿ ಜನಸಿದ ಹರ್‌ಪ್ರೀತ್ ಬ್ರಾರ್ ಆರಂಭದಲ್ಲಿ ಬ್ಯಾಟ್ಸ್‌ಮನ್ ಆಗುವ ಒಲವು ಹೊಂದಿದ್ದರು. ಆದರೆ ನಂತರ ಅವರು ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಧಿಸಲು ಆರಂಭಿಸಿದ ನಂತರ ಬೌಲಿಂಗ್‌ನತ್ತ ಹೆಚ್ಚಿನ ಚಿತ್ತ ನೆಟ್ಟರು. ಬಳಿಕ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಅಂತರ್‌ಜಿಲ್ಲಾ ಮಟ್ಟದಲ್ಲಿ ಮಿಂಚಿದರು. 2014ರಲ್ಲಿ ರೋಪರ್ ನಗರದ ಪರವಾಗಿ ಆಡುತ್ತಿದ್ದಾಗ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್ ಪಡೆದು ಅನಿಲ್ ಕುಂಬ್ಳೆ ಮಾಡಿದ ಸಾಧನೆಯನ್ನು ಸ್ಥಳೀಯ ಮಟ್ಟದಲ್ಲಿ ಮಾಡಿ ಮಿಂಚಿದ್ದರು.