ಟೀಮ್ ಇಂಡಿಯಾ ವಿಶ್ವ ಕ್ರಿಕೆಟನ್ನು ಆಳುತ್ತಿದೆ. ಆದರೆ, ತಂಡದೊಳಗೆ ಎಲ್ಲವೂ ಅಂದುಕೊಂಡಂತೆ ಇಲ್ಲ ಎಂಬುದು ಜಗಜ್ಜಾಹಿರವಾಗಿದೆ. ನಾಯಕ ವಿರಾಟ್ ಕೊಹ್ಲಿ, ಏಕದಿನ ಮತ್ತು ಟಿ20 ಉಪನಾಯಕ ರೋಹಿತ್ ಶರ್ಮಾ ನಡುವೆ ಮನಸ್ತಾಪ ಇದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ ತಮ್ಮ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದರು. ಆದರೆ ಏಕದಿನ ಕ್ರಿಕೆಟ್ನಲ್ಲಿ ಖಾಯಂ ಆದ ಹಿಟ್ಮ್ಯಾನ್ ಟೆಸ್ಟ್ನಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಯಿತು. 2019 ಏಕದಿನ ವರ್ಲ್ಡ್ಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಪರಿಣಾಮ ರೋಹಿತ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸೆಲೆಕ್ಟ್ ಆಗಿದ್ದರು.
ಟೂರ್ನಿಗೆ ಆಯ್ಕೆಯಾದರೂ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರೂ ಸಹ ಎರಡೂ ಟೆಸ್ಟ್ನಲ್ಲಿ ಆಡುವ 11ರ ಬಳಗದಲ್ಲಿ ಅವರನ್ನು ಆಡಿಸಲಿಲ್ಲ. ಇದರಿಂದ ಅವರು ಸಹಜವಾಗಿ ಬೇಸರಗೊಂಡಿದ್ದಾರೆ. ರೋಹಿತ್ ಅಭಿಮಾನಿಗಳೂ ಕೂಡ ಬೇಸರಗೊಂಡಿದ್ದು, . ಪದೇಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಬೆಸ್ಟ್ ಆತ್ಮೀಯ ಗೆಳೆಯ ಕನ್ನಡಿಗ ಕೆ ಎಲ್ ರಾಹುಲ್ಗೆ ಅವಕಾಶ ನೀಡುವುದು ಬಿಟ್ಟು ರೋಹಿತ್ರನ್ನು ಆಡಿಸಿ ಎಂಬ ಒತ್ತಾಯ ಸಹ ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರೋಹಿತ್ ಹಾಗೂ ಕೆ ಎಲ್ ರಾಹುಲ್ರ ಟೆಸ್ಟ್ ಕ್ರಿಕೆಟ್ನ ಅಂಕಿಅಂಶಗಳನ್ನು ಹಾಕಿ ರೋಹಿತ್ ಅತ್ಯುತ್ತಮ ಆಟಗಾರ ಎಂದು ಬಿಂಬಿಸಿದ್ದಾರೆ ರೋಹಿತ್ ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ಗೆ ರೋಹಿತ್ ಲೈಕ್ ಮಾಡಿದ್ದಾರೆ.. ರೋಹಿತ್ಗೆ ರಾಹುಲ್ ಕಂಡ್ರೂ ಅಷ್ಟಕಷ್ಟೇನಾ ಎಂಬ ಪ್ರಶ್ನೆಯನ್ನು ಈ ಒಂದು ಲೈಕ್ ಹುಟ್ಟು ಹಾಕಿದೆ.
ಟ್ವಿಟ್ಟರ್ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರನ್ನು ಅನ್ಫಾಲೋ ಮಾಡಿರುವ ರೋಹಿತ್ ಶರ್ಮಾ. ರಾಹುಲ್ ವೈಫಲ್ಯ ಕಂಡರೂ ಅವಕಾಶ ನೀಡುತ್ತಿರುವುದು ಏಕೆ?, ರೋಹಿತ್ಗೆ ಅವಕಾಶ ನೀಡಿ ಎಂಬರ್ಥದಲ್ಲಿರುವ ಪೋಸ್ಟ್ಗೆ ರೋಹಿತ್ ಲೈಕ್ ಮಾಡಿ ಮತ್ತೊಮ್ಮೆ ಇನ್ಸ್ಟಾಗ್ರಾಮ್ನಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.