ಕನ್ನಡಿಗ ರಾಹುಲ್ ಲೈಫ್ ಗೆ ಎಂಟ್ರಿಯಾದಳು ಖ್ಯಾತ ಬಾಲಿವುಡ್ ನಟನ ಮಗಳು…!?

Date:

ಬಾಲಿವುಡ್ ಹಾಗೂ ಕ್ರಿಕೆಟಿಗೂ ಅವಿನಾಭಾವ ನಂಟು. ಅದಕ್ಕೆ ಸರಿ ಹೊಂದುವಂತೆ ಸಾಕಷ್ಟು ಭಾರಿ ಬಿ-ಟೌನ್ ನಟಿಯರೊಂದಿಗೆ ಬ್ಲೂ ಬಾಯ್ಸ್ ಹೆಸರು ಕೇಳಿ ಬರುತ್ತಲೇ ಇರುತ್ತೆ. ಈಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಹೆಸರು ಬಾಲಿವುಡ್ ನಟಿಯೊಂದಿಗೆ ತಳುಕು ಹಾಕಿಕೊಂಡಿದೆ. ಹಾಗಾದ್ರೆ ಆ ಆಟಗಾರರು ಯಾರು ಅಂತೀರಾ ಹೇಳ್ತೀವೀ ಕೇಳಿ.
ನಿಮ್ಗೆಲ್ಲಾ ಭಾರತೀಯ ಕ್ರಿಕೆಟ್ ತಂಡದ ಕನ್ನಡಿಗ ಕೆ.ಎಲ್. ರಾಹುಲ್ ಗೊತ್ ಅಲ್ವಾ..? ಹೊಡಿ ಬಡಿ ಆಟದಿಂದಲೇ ಸಾಕಷ್ಟು ಜನಮನ್ನಣೆಗಳಿಸಿಕೊಂಡವವರು. ಈದೀಗ ಇವರ ಹೆಸರು ಖ್ಯಾತ ಬಾಲಿವುಡ್ ನಟನ ಮಗಳೊಂದಿಗೆ ಕೇಳಿ ಬಂದಿದೆ.
ಅತ್ತ ವಿಶ್ವಕಪ್ನಲ್ಲಿ ರಾಹುಲ್ ಮಿಂಚಿನ ಓಟ ನಡೆಸುತ್ತಿದ್ದರೆ. ಇತ್ತ ರಾಹುಲ್ ಹೆಸರಿನೊಂದಿಗೆ ಆತಿಯ ಶೆಟ್ಟಿ ಹೆಸರು ಎಲ್ಲೆಂದರಲ್ಲಿ ಹರಿದಾಡುತ್ತಿದೆ. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ರಾಹುಲ್ ಕನ್ನಡಿಗ. ಮೂಲತಃ ಮಂಗಳೂರಿನವರು. ಅಲ್ಲದೆ ಆತಿಯಾ ಶೆಟ್ಟಿ ಹೆಸರಿನಲ್ಲಿ ಶೆಟ್ಟಿ ಎನ್ನುವ ಸರ್ನೇಮ್ ಇರುವುದರಿಂದ ಇವರಿಗೆ ಕನ್ನಡದ ನಂಟಿದೆ ಎನ್ನುವೂದು ಸ್ಫಷ್ಟವಾಗಿ ತಿಳಿಯುತ್ತೆ.


ಆತಿಯಾ ಶೆಟ್ಟಿ ಸಲ್ಮಾನ್ ಖಾನ್ ನಿರ್ಮಾಣದ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕಟ್ಟ ನಟಿ. ಸದ್ಯ ರಾಹುಲ್ ಮತ್ತು ಆತಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಆಕಾಂಕ್ಷ ರಂಜನ್ ಕಪೂರ್ ಎಂಬವರು ಫೋಟೋವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಪೋಟೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇವರಿಬ್ಬರ ನಡುವೆ ಲವ್ವಿ ಡವ್ವಿ ಇದೇಯಾ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಆತಿಯಾ ಹಾಗೂ ರಾಹುಲ್ ಕಳೆದ ಫೆಬ್ರವರಿಯಿಂದಲೇ ಜೊತೆಯಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಬಹಿರಂಗವಾಗಿದೆ. ಆದರೆ ತಮ್ಮ ಪ್ರೇಮ್ ಕಹಾನಿಯನ್ನು ಬಹಿರಂಗವಾಗದಂತೆ ಕಾಪಾಡಿಕೊಂಡಿರುವ ಆತಿಯಾ ಸದ್ಯ ಇಂಗ್ಲೆಂಡ್ನಲ್ಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಕೂಡ ಇಂಗ್ಲೆಂಡ್ನಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಕೆ.ಎಲ್ ರಾಹುಲ್ ಜೊತೆ ಈ ಹಿಂದೆಯೂ ಬಾಲಿಯೂಡ್, ಸ್ಯಾಂಡಲ್ವುಡ್ ಸೇರಿದಂತೆ ಹಲವಾರು ನಟಿ ಮಣಿಯರ ಹೆಸರೂ ಕೂಡಾ ಕೇಳಿ ಬಂದಿತ್ತು. ಆದ್ರೆ ರಾಹುಲ್ ಆ ಡೇಟಿಂಗ್ ವಿಚಾರಗಳಿಗೆ ತೆರೆ ಎಳೆಯುವಂತಹ ಕೆಲಸ ಮಾಡಿದ್ದರ. ಆದ್ರೆ ಈಗ ರಾಹುಲ್ ಮತ್ತು ಆತಿಯಾ ಮಧ್ಯ ಇದೆ ಎನ್ನುವುದು ಕೂತುಹಲ ಮೂಡಿಸಿದೆ.

Share post:

Subscribe

spot_imgspot_img

Popular

More like this
Related

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು?

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು? ಆಹಾರ ಸರಿಯಾಗಿ ಜೀರ್ಣವಾದರೆ...