ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಸುದ್ದಿಯ ಬೆನ್ನಲ್ಲೇ ಟ್ವೀಟ್ ಮಾಡಿರುವ
ರಾಮ್ ಗೋಪಾಲ್ ವರ್ಮಾ ತಮ್ಮ ಟ್ವೀಟ್ ನಲ್ಲಿ, “ಬಾಹುಬಲಿ 2 ಟ್ರೈಲರ್ 3 ವರ್ಷಗಳಲ್ಲಿ 11 ಕೋಟಿ ವೀಕ್ಷಣೆಗಳು, 3 ತಿಂಗಳಲ್ಲಿ ಆರ್ ಆರ್ ಆರ್ 3.8 ಕೋಟಿ ವೀಕ್ಷಣೆಗಳು ಮತ್ತು 3 ದಿನಗಳಲ್ಲಿ ಕೆಜಿಎಫ್ 2 14 ಕೋಟಿ ವೀಕ್ಷಣೆಗಳು.. ಓಹ್! ಇದು ಎಲ್ಲಾ ಕನ್ನಡಿಗರ ಪರವಾಗಿ ಪ್ರಶಾಂತ್ ನೀಲ್ ಅವರು ಇತರ ಎಲ್ಲ ಚಲನಚಿತ್ರೋದ್ಯಮಗಳ ಹೊಟ್ಟೆಗೆ ನೀಡಿರುವ ತಲುಪಿಸಿದ STOMACH PUNCH” ಎಂದು ಬರೆದುಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರು ಮಾಡಿದ ಈ ಟ್ವೀಟ್ ಈಗ ಸ್ಟಾರ್ ನಟರ ಅಭಿಮಾನಿಗಳ ನಡುವೆ ಟ್ವೀಟ್ ವಾ ರ್ ಗೂ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಹಿಂದೆ ಕನ್ನಡ ಚಿತ್ರರಂಗವನ್ನು ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಭಾರತದ ಸಿನಿಮಾ ರಂಗವೇ ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಆದರೆ ಕೆಜಿಎಫ್ ಮೂಲಕ ಕನ್ನಡ ಸಿನಿಮಾ ರಂಗವನ್ನು ವಿಶ್ವಮಟ್ಟಕ್ಕೆ ಏರಿಸಿದ್ದರ ಹಿರಿಮೆ ಪ್ರಶಾಂತ್ ನೀಲ್ ಮತ್ತು ಯಶ್ ಮತ್ತು ಅವರ ಕೆಜಿಎಫ್ ತಂಡಕ್ಕೆ ಸೇರಬೇಕು ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.