ಪ್ರಶಾಂತ್ ನೀಲ್ ಉಗ್ರಂ ಸಿನಿಮಾದ ಮೂಲಕ ಬ್ಲಾಕ್ ಬಸ್ಟರ್ ನೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿರ್ದೇಶಕ. ಉಗ್ರಂ ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಪ್ರಶಾಂತ್ ನೀಲ್ ಒಬ್ಬ ಸೂಪರ್ ಡೈರೆಕ್ಟರ್ ಗುರು ಎಂದು ತೀರ್ಮಾನಿಸಿ ಬಿಟ್ಟಿದ್ದರು.. ಇನ್ನು ಪ್ರಶಾಂತ್ ನೀಲ್ ಮತ್ತಷ್ಟು ನೇಮ್ ಅಂಡ್ ಫೇಮ್ ಪಡೆದುಕೊಂಡಿದ್ದು ಕೆಜಿಎಫ್ ಮೂಲಕ. ಕೇವಲ ಕನ್ನಡ ನೆಲದಲ್ಲಿ ತಾನೊಬ್ಬ ಬೆಸ್ಟ್ ಡೈರೆಕ್ಟರ್ ಎನಿಸಿಕೊಂಡಿದ್ದ ಪ್ರಶಾಂತ್ ನೀಲ್ ಅವರು ಕೆಜಿಎಫ್ ಮುಖಾಂತರ ನೇಷನ್ ವೈಡ್ ಫೇಮಸ್ ಆಗಿ ಬಿಟ್ಟರು. ಇನ್ನು ಪ್ರಶಾಂತ್ ನೀಲ್ ಅವರ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿದ್ದು ಇದೀಗ ಅವರು ತೆಲುಗು ಸ್ಟಾರ್ ನಟರಿಗೆ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಕೆಜಿಎಫ್2 ನಂತರ ಪ್ರಶಾಂತ್ ನೀಲ್ ಅವರ ನಿರ್ದೇಶನದ ಯಾವ ಚಿತ್ರ ಬಿಡುಗಡೆಯಾಗಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಶ್ರೀಮುರಳಿ ಅವರಿಗೆ ಉಗ್ರಂ ವೀರಂ ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸುವುದು ಪಕ್ಕಾ. ಆದರೆ ಇದಾದ ಬಳಿಕ ಯಾವೊಂದು ಕನ್ನಡ ಚಿತ್ರವನ್ನು ಸಹ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ಅನೌನ್ಸ್ಮೆಂಟ್ ಆಗಿಲ್ಲ. ಇನ್ನು ಮೂಲಗಳ ಪ್ರಕಾರ ಪ್ರಶಾಂತ್ ನೀಲ್ ಅವರು ಕೆಜಿಎಫ್ ನಂತರ ತೆಲುಗಿನ ಜೂನಿಯರ್ ಎನ್ಟಿಆರ್ ಅವರಿಗೆ ಸಿನಿಮಾವೊಂದನ್ನು ಮಾಡುವುದು ಪಕ್ಕಾ ಆಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಮಹೇಶ್ ಬಾಬು ಅವರನ್ನು ಸಹ ಪ್ರಶಾಂತ್ ನೀಲ್ ಅವರು ಭೇಟಿಯಾಗಿದ್ದು ಒಂದು ಗಂಟೆಯ ಕಾಲ ಮಾತುಕತೆ ನಡೆಸಿದ್ದು ಅವರಿಗೂ ಸಹ ಒಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.
ಒಟ್ಟಿನಲ್ಲಿ ತೆಲುಗಿನ ಈ ಇಬ್ಬರು ಸ್ಟಾರ್ ನಟರಿಗೆ ಚಿತ್ರವನ್ನು ನಿರ್ದೇಶಿಸಲು ಪ್ರಶಾಂತ್ ನೀಲ್ ಅವರು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಕನ್ನಡ ಚಿತ್ರ ನಿರ್ದೇಶನ ಕಡಿಮೆ ಮಾಡಲಿದ್ದಾರಾ ಎಂಬ ಪ್ರಶ್ನೆ ಇದೀಗ ಕನ್ನಡಚಿತ್ರಾಭಿಮಾನಿಗಳಲ್ಲಿ ಉದ್ಭವಿಸಿದೆ