ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಸಹ ಕನ್ನಡದ ವಿರುದ್ಧವಾಗಿಯೇ ಕಾಣುತ್ತದೆ. ಈ ಹಿಂದೆ ಕನ್ನಡ ಬರಲ್ಲ ಅಂತ ಧಿಮಾಕು ತೋರಿಸಿದ ಈ ನಟಿ ಇದೀಗ ಮತ್ತೊಮ್ಮೆ ಕನ್ನಡಿಗರ ಬಾಯಿಗೆ ಆಹಾರ ವಾಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ಕನ್ನಡ ಕಡೆಗಣನೆಯನ್ನು ರಶ್ಮಿಕಾ ಮಂದಣ್ಣ ಅವರು ಬೇಕು ಅಂತಾನೇ ಮಾಡ್ತಾರಾ ಹೀಗೆ ಮಾಡಿದರೆ ನನ್ನ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಇರುತ್ತದೆ ಅಂತ ಹೀಗೆ ಮಾಡ್ತಾರಾ ಎಂದು ಹಲವಾರು ಮಂದಿ ಮಾತನಾಡಿ ಕೊಳ್ಳುವಂತಹ ಪರಿಸ್ಥಿತಿಯೂ ಸಹ ನಿರ್ಮಾಣವಾಗಿದೆ. ಹೌದು ರಶ್ಮಿಕಾ ಮಂದಣ್ಣ ಅವರು ಮತ್ತೆ ಕನ್ನಡಿಗರನ್ನು ಕೆಣಕುವಂತಹ ಕೆಲಸವೊಂದನ್ನು ಮಾಡಿದ್ದಾರೆ.
ಇಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ಎಲ್ಲಾ ಸೆಲೆಬ್ರಿಟಿಗಳು ಸಹ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿದ್ದಾರೆ. ಕನ್ನಡದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇರುವ ದೊಡ್ಡ ದೊಡ್ಡ ನಟರೇ ಪೋಸ್ಟ್ಗಳನ್ನು ಹಾಕುವುದರ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿದರೆ ರಶ್ಮಿಕಾ ಮಂದಣ್ಣ ಅವರು ಮಾತ್ರ ಆಂಗ್ಲ ಭಾಷೆಯಲ್ಲಿ ಇನ್ಸ್ಟಾಗ್ರಾಂ ಸ್ಟೋರಿ ಹಾಕುವುದರ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಮುಗಿಸಿಬಿಟ್ಟಿದ್ದಾರೆ.
24 ಗಂಟೆಗಳ ನಂತರ ಮಾಯವಾಗುವ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿ ಪೋಸ್ಟ್ ಮಾಡಿರುವ ರಶ್ಮಿಕಾ ಮಂದಣ್ಣ ಮೊಬೈಲ್ ಬ್ರ್ಯಾಂಡ್ ಜಾಹೀರಾತು ಇನ್ನಿತರ ಜಾಹೀರಾತುಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವಾರು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅಂದರೆ ದುಡ್ಡು ಪಡೆದು ಪೋಸ್ಟ್ ಮಾಡುವ ಜಾಹೀರಾತೇ ರಶ್ಮಿಕಾ ಅವರಿಗೆ ಕನ್ನಡ ರಾಜ್ಯೋತ್ಸವಕ್ಕಿಂತ ಹೆಚ್ಚಾ? ಎಂದು ಕನ್ನಡಿಗರು ಇದೀಗ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಕಿಡಿಕಾರಿದ್ದಾರೆ.