ನಿನ್ನೆ ಮಂಡ್ಯ ನಗರದಲ್ಲಿ ವಾಹನ ದಾಖಲಾತಿಗಳನ್ನು ಪರಿಶೀಲಿಸುವ ವೇಳೆ ಯುವತಿಯೊಬ್ಬಳು ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಬಂದಿದ್ದಾನೆ ಇದನ್ನು ತಡೆದ ಪಿಎಸ್ ಐ ಮತ್ತು ಕಾನ್ ಸ್ಟೆಬಲ್ ಗಳು ಆಕೆಗೆ ದಂಡವನ್ನ ಕಟ್ಟುವಂತೆ ಕೇಳಿದ್ದಾರೆ. ನನ್ನ ಬಳಿ ಹಣವಿಲ್ಲ ಗೂಗಲ್ ಪೇ ಇದೆ , ನಾನು ಈಗಿಂದೀಗಲೆ ಫೈನ್ ಕಟ್ಟಲು ಆಗುವುದಿಲ್ಲ ಎಂದು ಪೊಲೀಸರ ವಿರುದ್ಧ ರಸ್ತೆಯಲ್ಲಿ ಕೂಗಾಡುತ್ತಿದ್ದ ಆ ಯುವತಿಗೆ ಧೈರ್ಯ ಕಳೆದುಕೊಂಡ ಪಿಎಸ್ಐ ಸವಿತಾ ಗೌಡ ಅವರು ಕಪಾಳಮೋಕ್ಷ ಮಾಡಿ ಬಿಟ್ಟರು.
ಇನ್ನು ಪಿಎಸ್ ಐ ಸವಿತಾ ಗೌಡ ಅವರ ಈ ರಾಕ್ಷಸ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿರೋಧ ಉಂಟಾಗಿತ್ತು. ಮಂಡ್ಯದ ಡಿವೈಎಸ್ ಪಿ ಅವರು ಸಹ ಪೊಲೀಸರು ಸಾರ್ವಜನಿಕರ ಜೊತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು ಎಂದು ಬುದ್ದಿವಾದ ಹೇಳಿದ್ದರು.
ಇದೀಗ ನಟಿ ಪಾರುಲ್ ಯಾದವ್ ಅವರು ಈ ವಿಡಿಯೋ ಕುರಿತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು ಪೊಲೀಸರು ಇರುವುದು ಸಾರ್ವಜನಿಕರ ರಕ್ಷಣೆಗೆ ಹೊರತು ಈ ರೀತಿ ಅಧಿಕಾರ ಚಲಾಯಿಸುವುದಕ್ಕೆ ಅಲ್ಲ ಬನ್ನಿ ನಾವೆಲ್ಲರೂ ಇಂತಹ ಅಧಿಕಾರಿಗಳ ವಿರುದ್ಧ ಹೋರಾಡೋಣ ಎಂದು ಆ ಇಎಸ್ ಐ ಮಾಡಿದ ದರ್ಪದ ವಿರುದ್ಧ ದನಿ ಎತ್ತಿದ್ದಾರೆ.