ರಾಜ್ಯದಲ್ಲಿ ನೆರೆ ಪರಿಹಾರದ ಸಂಬಂಧಿಸಿದಂತೆ ಹೋರಾಟಗಳು ನೆಡೆಯುತ್ತಿವೆ ಇದೀಗ ಕರವೇ ಕೂಡ ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಸರಕಾರದ ನಿಲುವನ್ನು ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಖಂಡಿಸಿದರು. ರಾಜ್ಯದ ಉತ್ತರ ಕರ್ನಾಟಕ, ಹೈ-ಕ ಭಾಗದಲ್ಲಿ ನೆರೆ ಬಂದು ಲಕ್ಷಾಂತರ ಮಂದಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ, ಲಕ್ಷಾಂತರ ಎಕರೆ ಜಮೀನು ನಾಶವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಕೇಂದ್ರ ಸರಕಾರ ಬಾರದಿರುವುದನ್ನು ಪ್ರತಿಭಟನಾಕಾರರು ವಿರೋಧಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನಾರಾಯಣಗೌಡ ಅವರು, ರಾಜ್ಯದ ನೆರೆ ಸಂತ್ರಸ್ಥರ ಸಂಕಷ್ಟಕ್ಕೆ ಧಾವಿಸದೆ ಕೇಂದ್ರ ಸರಕಾರ ತಾರತಮ್ಯ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.