ಕರಾಳ ದಿನ: ದೈವಾಧೀನವಾದ ನಡೆದಾಡುವ ದೇವರು
ಪರಮಪೂಜ್ಯ ಸಿದ್ದಗಂಗಾ ಶ್ರೀಗಳು ಇಂದು ತಮ್ಮ ಮಠದಲ್ಲೇ ಬೆಳಗ್ಗೆ 11.44 ಸುಮಾರಿಗೆ ಶಿವೈಕ್ಯರಾಗಿದ್ದಾರೆ.. ಈ ಬಗ್ಗೆ ವೈದ್ಯರು ಅಧಿಕೃತ ಮಾಹಿತಿ ನೀಡಿದ್ದು ಸರ್ಕಾರವು ಸ್ಪಷ್ಟ ಪಡಿಸಿದೆ. 111 ವರ್ಷಗಳ ಸುಧೀರ್ಘ ಜೀವನದಲ್ಲಿ ತ್ರಿವಿಧ ದಾಸೋಹಿ ಆಗಿ ಇಡೀ ದೇಶಕ್ಕೆ ಮಾದರಿಯಾದ ಶ್ರೀಗಳು ಇನ್ನು ನೆನಪಿನಲ್ಲಿ ಉಳಿಯಲ್ಲಿದ್ದಾರೆ..
ನಾಳೆ ನಡೆಯಲಿದೆ ಅಂತ್ಯಸಂಸ್ಕಾರ..
ನಾಳೆವರೆಗು ಶ್ರೀಗಳ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.. ನಾಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಗಳ ಅಂತ್ಯಕ್ರಿಯೆಯನ್ನ ಮಠದಲ್ಲೇ ನೆರವೇರಿಸಲಾಗುತ್ತದೆ.. ಭಕ್ತ ವೃಂದ ಶ್ರೀಗಳ ದರ್ಶನ ಪಡೆಯಲು ಆಗಮಿಸುವ ನಿಟ್ಟಿನಲ್ಲಿ ಸಕಲ ಭದ್ರತೆಯನ್ನ ಮಾಡಿಕೊಳ್ಳಲಾಗಿದೆ..
ನಾಳೆ ಸರ್ಕಾರಿ ರಜೆ.. ಮೂರು ದಿನ ಶೋಕಾಚರಣೆ..
ಶ್ರೀಗಳು ತಮ್ಮ 111 ವಯಸ್ಸಿನಲ್ಲಿ ಶಿವೈಕ್ಯರಾಗಿದ್ದು, ನಾಳೆ ಸರ್ಕಾರಿ ರಜೆಯನ್ನ ಘೋಷಣೆ ಮಾಡಲಾಗಿದೆ.. ಜೊತೆಗೆ ಮೂರು ದಿನಗಳ ಕಾಲ ಶೋಕಚರಣೆ ನಡೆಯಲಿದೆ.. ಅಗಲಿದ ನಡೆದಾಡುವ ದೇವರಿಗೆ ಇಡೀ ಕರುನಾಡ ಕಂಬನಿ ಮಿಡಿಯುತ್ತಿದ್ದು ಶ್ರೀಗಳ ಅಂತಿಮ ಯಾತ್ರೆಗೆ ಮಠದಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ