ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. 28 ಸ್ಥಾನಗಳ ಪೈಕಿ 25 ಸ್ಥಾನ ಪಡೆಯುವ ಮೂಲಕ ಕರುನಾಡಲ್ಲಿ ಎಲ್ಲೆಲ್ಲೂ ಕಮಲ ಅರಳಿ ನಿಂತಿದೆ.
ಹೀಗಾಗಿ ದಕ್ಷಿಣ ಭಾರತದಲ್ಲೇ ಬಿಜೆಪಿಗೆ ಕರ್ನಾಟಕದಲ್ಲಿ ಭದ್ರ ನೆಲೆ ಸಿಕ್ಕಂತಾಗಿದೆ. ಇದು ಪ್ರಧಾನಿ ಮೋದಿಯವರ ಖುಷಿಯನ್ನು ಇಮ್ಮಡಿಗೊಳಿಸಿದ್ದು, ಹೀಗಾಗಿ ಕರ್ನಾಟಕಕ್ಕೆ ಬಂಪರ್ ಗಿಫ್ಟ್ ಕೊಡಲು ಮೋದಿ ತಯಾರಿ ನಡೆಸಿದ್ದಾರೆ ಅಂತಾ ಪಕ್ಷದ ಮೂಲಗಳು ತಿಳಿಸಿವೆ.
ಸಚಿವ ಸಂಪುಟ ವಿಸ್ತರಣೆ ವೇಳೆ ಕರ್ನಾಟಕಕ್ಕೆ ಈ ಬಾರಿ 4 ರಿಂದ 5 ಸಚಿವ ಸ್ಥಾನಗಳು ಸಿಗುವ ಸಾಧ್ಯತೆಗಳಿವೆ ಅಂತಾ ಹೇಳಲಾಗ್ತಿದೆ. ಇನ್ನು ಜಾತಿ ಸಮೀಕರಣದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಲಿದ್ದು,
ಈಗಿರುವ ಹಾಲಿ ಸಚಿವರಿಗೆ ಕೊಕ್ ನೀಡಿ ಮೋದಿ, ಹೊಸ ಮುಖಗಳಿಗೆ ಅವಕಾಶ ಕೊಡ್ತಾರೆ ಅಂತಾ ಹೇಳಲಾಗ್ತಿದೆ.ಅದರಂತೆ ಲಿಂಗಾಯತ ಕೋಟಾದಡಿ ಸುರೇಶ್ ಅಂಗಡಿ ಅಥವಾ ಜಿ.ಎಸ್. ಬಸವರಾಜು ಅವರಿಗೆ, ಒಕ್ಕಲಿಗ ಕೋಟಾದಲ್ಲಿ ಶೋಭಾ ಕರಂದ್ಲಾಜೆ ಅಥವಾ ಪ್ರತಾಪ್ ಸಿಂಹ, ದಲಿತ ಕೋಟಾದಲ್ಲಿ ಉಮೇಶ್ ಜಾದವ್ ಅಥವಾ ಶ್ರೀನಿವಾಸ್ ಪ್ರಸಾದ್, ಹಿಂದುಳಿದ ವರ್ಗ ಕೋಟಾದಲ್ಲಿ ನಳಿನ್ ಕುಮಾರ್ ಕಟೀಲ್ ಅಥವಾ ಪಿ.ಸಿ.ಮೋಹನ್, ಬ್ರಾಹ್ಮಣ ಕೋಟಾದಲ್ಲಿ ಪ್ರಹ್ಲಾದ್ ಜೋಶಿ. ಈ ರೀತಿ ಕಾಂಬಿನೇಷನ್ ನಲ್ಲಿ ಸಚಿವ ಸ್ಥಾನ ಕೊಡಲಾಗುವುದು ಅಂತಾ ಹೇಳಲಾಗ್ತಿದೆ. ಆದ್ರೆ ರಾಜ್ಯಕ್ಕೆ ನಿಜಕ್ಕೂ 5 ಸಚಿವ ಸ್ಥಾನ ಸಿಗುತ್ತಾ ಎಂಬುದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.