ಕರ್ನಾಟಕದಲ್ಲಿ ಕರೋನಾ ಎಮರ್ಜೆನ್ಸಿ …! ಏನೆಲ್ಲಾ ಇರುತ್ತೆ? ಏನೆಲ್ಲಾ ಇರಲ್ಲ? ಇಲ್ಲಿದೆ ಅಷ್ಟೂ ಡೀಟೆಲ್ಸ್..!

Date:

ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನಾ ವೈರಸ್ ಗೆ ನಮ್ಮ ಕಲಬುರಗಿಯಲ್ಲಿ ಮೊದಲ ಬಲಿಯಾಗಿರುವುದರಿಂದ ಸಹಜವಾಗಿ ಆತಂಕ ಹೆಚ್ಚಿದೆ. ಹೀಗಾಗಿ ರಾಜ್ಯ ಸರ್ಕಾರ ತೀವ್ರ ಕಟ್ಟೆಚ್ಚರವಹಿಸಲು ಮುಂದಾಗಿದೆ.

ಸಾರ್ವಜನಿಕ ಸಂಪರ್ಕವನ್ನು ಆದಷ್ಟು ಕಡಿತಗೊಳಿಸಲು ಮುಂದಾಗಿದೆ. ‌ಜನ ಹೆಚ್ಚು ಸೇರುವ ಜಾತ್ರೆ, ಉತ್ಸವ, ಕ್ರೀಡಾಕೂಟಗಳನ್ನು ನಿಷೇಧಿಸಿದೆ. ಅಲ್ಲದೆ ಸಭೆ, ಸಮಾರಂಭಗಳಿಗೆ , ವಿವಾಹಗಳಿಗೆ ನಾನಾ ನಿರ್ಭಂದಗಳನ್ನು ವಿಧಿಸಿದೆ. ಸಾಂಕ್ರಾಮಿಕ ರೋಗದ ಹಿನ್ನೆಯಲ್ಲಿ ರಾಜ್ಯದಲ್ಲಿ ಇಂಥಾ ಪರಿಸ್ಥಿತಿ ನಿರ್ಮಾಣವಾಗಿದ್ದು ಇದೇ ಮೊದಲು. ರಾಜ್ಯದಲ್ಲಿ ಒಂದು ವಾರಗಳ ಕಾಲ ಸಾರ್ವಜನಿಕ ವಲಯಗಳು ಸಂಪೂರ್ಣ ಬಂದ್ ಆಗಲಿವೆ. ಅಲ್ಲದೆ ವಾರದ ಬಳಿಕ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.


ಏನೇನು ಇದೆ? ಏನೇನು ಮಾಡುವಂತಿಲ್ಲ?
*ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಒಂದು ವಾರಗಳ ಕಾಲ ಬಂದ್
*ವಿದ್ಯಾರ್ಥಿಗಳು ಒಟ್ಟಿ ಸೇರುವಂತಿಲ್ಲ, ಯಾರೂ ಒಂದೆಡೆ ಗುಂಪುಗೂಡುವಂತಿಲ್ಲ.
*ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.
*ಸರ್ಕಾರದ ಎಲ್ಲಾ ಕಾರ್ಯಕ್ರಮಗಳೂ ಒಂದು ವಾರಗಳ ಕಾಲ ಬಂದ್.
* ಇಂದಿನಿಂದ ಒಂದು ವಾರ ಮಾಲ್ , ಸಿನಿಮಾ ಥಿಯೇಟರ್, ಪಬ್ ಅಂಡ್ ನೈಟ್ ಕ್ಲಬ್​, ಜಿಮ್​ ಬಂದ್​.
* ಉಪನ್ಯಾಸ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮ, ಮದುವೆ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮಗಳನ್ನು ಒಂದು ವಾರ ನಡೆಸುವಂತಿಲ್ಲ.
*ದೇವರ ಜಾತ್ರೆ, ಮನೆ ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೂ ನಿಷೇಧ.
*ಐಟಿಬಿಟಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ.
*ಅಂತಾರಾಷ್ಟ್ರೀಯ ವೀಸಾಗಳಿಗೆ ಏಪ್ರಿಲ್.15ರ ವರೆಗೆ ನಿರ್ಬಂಧ.
*ಯಾರೂ ಗುಂಪು ಸೇರಬಾರದು, ಯಾರ ಜೊತೆಯೂ ಕೈ ಕುಲುಕಬಾರದು.
* ಎಲ್ಲಾ ರೀತಿಯ ಸಾರ್ವಜನಿಕ ಸಭೆ ಮತ್ತು ಸಮಾರಂಭಗಳಿಗೆ ನಿಷೇಧ.

ಯಾವೆಲ್ಲಾ ಸೇವೆಗಳು ಅಬಾಧಿತ
*ಎಲ್ಲಾ ಸರಕಾರಿ ಕಚೇರಿಗಳು, ಬ್ಯಾಂಕ್​ಗಳು ಮಾಮೂಲಿ ಕಾರ್ಯನಿರ್ವಹಿಸುತ್ತವೆ.
*ವಿಧಾನಮಂಡಲ ಅಧಿವೇಶನ ಮುಂದುವರಿಕೆ
* ಹೋಟೆಲ್​​, ಬಾರ್ ಮತ್ತು ರೆಸ್ಟೋರೆಂಟ್​ಗಳು
* ಧಾರ್ಮಿಕ ಕೇಂದ್ರಗಳಿಗೆ ನಿರ್ಭಂದವಿಲ್ಲ. ಆದರೆ, ಸಾಮೂಹಿಕ ಪ್ರಾರ್ಥನೆ, ಪೂಜೆ ಮಾಡದಂತೆ ಸಲಹೆ
* ಮೆಟ್ರೋ, ರೈಲು ಮತ್ತು ಬಸ್. ಆಟೋ, ಟ್ಯಾಕ್ಸಿ, ಎಟಿಎಂ ಮೊದಲಾದ ಸೇವೆ ಎಂದಿನಂತೆ

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....