ಬೆಂಗಳೂರು: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಯಾರ ಕಾಲದಲ್ಲಿ ಕೊಲೆ, ಅಪರಾಧ ಜಾಸ್ತಿ ಇತ್ತು ಅಂತ ದಾಖಲೆ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಮೊದಲು ಬಿಜೆಪಿಯವರು ಉತ್ತರ ಕೊಡಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟ ಆರೋಪ ವಿಚಾರವಾಗಿ ಮಾತನಾಡುತ್ತಾ, “ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಯಾರ ಕಾಲದಲ್ಲಿ ಕೊಲೆ, ಅಪರಾಧ ಜಾಸ್ತಿ ಇತ್ತು ಅಂತ ದಾಖಲೆ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಮೊದಲು ಬಿಜೆಪಿಯವರು ಉತ್ತರ ಕೊಡಲಿ” ಎಂದು ಟಾಂಗ್ ಕೊಟ್ಟರು.
ಇನ್ನೂ ದೇವರಾಜೇಗೌಡ ರಿಲೀಸ್ ಮಾಡಿದ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಧ್ವನಿ ಇರುವುದೇ ದೊಡ್ಡ ಸಾಕ್ಷಿ ಅಲ್ವೇ? ಅನ್ನುವ ಹೆಚ್ಡಿಕೆ ಹೇಳಿಕೆಗೆ, “ಕುಮಾರಸ್ವಾಮಿ ಪ್ರತಿಯೊಂದಕ್ಕೂ ಟೀಕಿಸಿ ಮಾತನಾಡುತ್ತಿದ್ದಾರೆ. ಆದರೆ ಕಾನೂನು ಚೌಕಟ್ಟು ಮತ್ತು ಎಸ್ಐಟಿ ನಿಯಮದನ್ವಯ ತನಿಖೆ ನಡೆಯುತ್ತದೆ. ಸರ್ಕಾರ ಕೂಡಾ ಇದನ್ನು ಗಮನಿಸಿಯೇ ಕೆಲಸ ಮಾಡುತ್ತದೆ” ಎಂದು ಹೇಳಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ !
Date:






