No menu items!
3.7 C
Munich
Wednesday, May 13, 2026

ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು.!

Must read

ಮೈಸೂರು: ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ. ಅಡುಗೆ ಅನಿಲ ಸೋರಿಕೆಯಿಂದ ಮೃತಪಟ್ಟಿರುವ ಶಂಕೆಯಾಗಿದ್ದು, ಕುಮಾರಸ್ವಾಮಿ(45), ಪತ್ನಿ ಮಂಜುಳಾ(39), ಮಕ್ಕಳಾದ ಅರ್ಚನಾ(19), ಸ್ವಾತಿ(17) ಮೃತ ದುರ್ಧೈವಿಗಾಳಗಿದ್ದಾರೆ. ಮೂಲತಃ ಚಿಕ್ಕಮಗಳೂರು ಸಖರಯಪಟ್ಟಣದ ಕುಟುಂಬ ಕಳೆದ 30 ವರ್ಷದಿಂದ ಮೈಸೂರಿನಲ್ಲಿ ವಾಸವಾಗಿದೆ. ನಾಲ್ವರೂ ಕಳೆದ ಗುರುವಾರ ಸಂಬಂಧಿಕರ ಮದುವೆ ಹೋಗಿದ್ದರು.
ಮದುವೆ ಮುಗಿಸಿಕೊಂಡು ತಮ್ಮ ಊರಾದ ಸಖರಯಪಟ್ಟಣಕ್ಕೆ ಹೋಗಿದ್ದರು. ಅಲ್ಲಿಂದ ಸೋಮವಾರ ಬೆಳಗ್ಗೆ ಮೈಸೂರಿಗೆ ವಾಪಸ್ಸಾಗಿದ್ದರು. ಸೋಮವಾರ ರಾತ್ರಿ ಅನಿಲ ಸೋರಿಕೆಯಾಗಿದೆ. ಇದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಂಗಳವಾರ ಇಡೀ ದಿನ ಮನೆಯ ಬಾಗಿಲು ತೆರೆದಿರಲಿಲ್ಲ. ಅರ್ಚನಾ ಮತ್ತು ಸ್ವಾತಿ ಕಾಲೇಜು ಸ್ನೇಹಿತರು ಮನೆ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ನಾಲ್ಕು ಗ್ಯಾಸ್ ಪತ್ತೆಯಾಗಿವೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article