ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಕಳೆದ ಒಂದೂವರೆ ತಿಂಗಳಿಂದ ಸಾವಿರದ ಮೇಲೆ ಪ್ರಕರಣಗಳು ಬರುತ್ತಿವೆ. ಇದಕ್ಕೆ ಕಾರಣ ಜುಲೈನಲ್ಲಿ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳು ಅನ್ನೋ ಅಭಿಪ್ರಾಯ ತಜ್ಞರದು.
ಹೌದು, ಆರಂಭದಲ್ಲಿ ರಾಜ್ಯ ಕೊರೊನಾ ಸೂಪರ್ ಸ್ಪ್ರೆಡ್ ತಡೆಗಟ್ಟವಲ್ಲಿ ಯಶಸ್ವಿ ಕಂಡಿತ್ತು. ಆದರೆ ತದನಂತರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇದಕ್ಕೆ ಕಾರಣ
ಜುಲೈ ತಿಂಗಳಿನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ.
ಆರೋಗ್ಯ ಇಲಾಖೆ ಆರಂಭದಲ್ಲಿ ಸೂಪರ್ ಸ್ಪ್ರೆಡ್ ರಗಳನ್ನ ಪತ್ತೆಹಚ್ಚಿ ಫುಲ್ ಸಕ್ಸಸ್ ಕಂಡಿತ್ತು.
ಐಸಿಎಂಆರ್ ನಿಂದ ಹಿಡಿದು ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ರಾಜ್ಯಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿತ್ತು. ತಬ್ಲಿಘಿ ಜಮಾತಾ, ಜ್ಯುಬ್ಲಿಯಂಟ್ ಕಾರ್ಖಾನೆ, ಬೆಂಗಳೂರಿನ ಪಾದರಾಯನಪುರ, ಹೊಂಗಸಂದ್ರ ಬಿಹಾರಿ ಹೀಗೆ ಎಲ್ಲರನ್ನು ಪತ್ತೆಹಚ್ಚಿತ್ತು.
ಈ ಸೂಪರ್ ಸ್ಪ್ರೆಡರ್ ಗಳಿಂದ ಕೊರೊನಾ ಪ್ರಕರಣಗಳು ಹೆಚ್ಚು ಸ್ಪ್ರೆಡ್ ಆಗದಂತೆ ಭಾರೀ ಎಚ್ಚರಿಕೆ ವಹಿಸಿತ್ತು. ಆದರೆ ಈಗ ಪರಿಸ್ಥಿತಿಯೇ ಬೇರೆಯಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಯಾರಿಂದ ಹೇಗೆ ಹರಡುತ್ತಿದೆ ಅನ್ನೋ ಮಾಹಿತಿಯೇ ಸಿಗದಂತಾಗಿದೆ.
ಕರ್ನಾಟಕ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಡಾಟಾ ಬಗ್ಗೆ ಭಾರತೀಯ ಸಂಖ್ಯಾ ಸಂಸ್ಥೆಯು ಇದೀಗ
ಕಂಪ್ಲೀಟ್ ಚಿತ್ರಣ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಮಾರ್ಚ್ ನಿಂದ ಜುಲೈವರೆಗೂ ಹೆಲ್ತ್ ಡಿಪಾರ್ಟ್ಮೆಂಟ್ ಸೂಪರ್ ಸ್ಪ್ರೆಡ್ ತಡೆಗಟ್ಟಿದ ಕಂಪ್ಲೀಟ್ ಡಿಟೈಲ್ಸ್ ನೀಡಿದೆ.
ಭಾರತೀಯ ಸಂಖ್ಯಾ ಸಂಸ್ಥೆ ಪ್ರಕಾರ ಜುಲೈವರೆಗೆ ಕೋವಿಡ್ -19 ಅನ್ನು ರಾಜ್ಯ ಯಶಸ್ವಿಯಾಗಿ ನಿಭಾಯಿಸಿದೆ. ಕ್ವಾರೆಂಟೈನ್ ನಿಯಮಾವಳಿಗಳು, ಟ್ರ್ಯಾಕಿಂಗ್ ಅಂಡ್ ಟ್ರೇಸಿಂಗ್ ಎಲ್ಲವೂ ಸಹ ಉತ್ತಮವಾಗಿತ್ತು. ಆದರೆ ಜುಲೈನಲ್ಲಿ ಬದಲಾದ ಕೆಲ ಲಾಕ್ ಡೌನ್ ನಿಯಮಗಳಿಂದ ಟ್ರ್ಯಾಕಿಂಗ್ ಅಂಡ್ ಟ್ರೇಸಿಂಗ್ ಕೈತಪ್ಪಿ ಕೊರೊನಾ ಹೆಚ್ಚಾಗಿದೆಯಂತೆ. ಹೀಗೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ ನಲ್ಲಿ ಕೊರೊನಾ ಪ್ರಕರಣಗಳ ಪ್ರಮಾಣ 12 ಪರ್ಸೆಂಟ್ ಹೆಚ್ಚಳ ಕಂಡಿದ್ದರೆ, ಜುಲೈನಲ್ಲಿ 21ರ ವೇಳೆಗೆ
ಐದು ಪಟ್ಟು ಅಂದರೆ 67 ಪರ್ಸೆಂಟ್ ಹೆಚ್ಚಳ ಕಂಡಿದೆ. ಜುಲೈ 1 ರಿಂದ ಜುಲೈ 21ರ ವೇಳೆಗೆ 55,826 ಹೊಸ
ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 32186 ಮಂದಿಗೆ ಅಂದರೆ ಶೇ 57.6ರಷ್ಟು ಮಂದಿಗೆ ಹೇಗೆ ಬಂತು ಅನ್ನೋದೆ ಗೊತ್ತಾಗಿಲ್ಲ. ಯಾರಿಂದ ಸೋಂಕು ತಗುಲಿರ ಬಹುದು ಅನ್ನೋ ಅಂದಾಜು ಸಿಗುತ್ತಿಲ್ಲ.
11,931 ಮಂದಿ ಅಂದ್ರೆ ಶೇ.21.4 ಪರ್ಸೆಂಟ್ ILI ಮತ್ತು 2366 ಮಂದಿ ಅಂದ್ರೆ ಶೇ.4.2 ಮಂದಿ ಸಾರಿ ಕೇಸ್ ಗಳಾಗಿವೆ.
ಇನ್ನೂ ಜೂನ್ ಅಂತ್ಯದವರೆಗೂ ಸೂಪರ್ ಸ್ಪ್ರೆಡ್ ರಗಳನ್ನ ಪತ್ತೆಹಚ್ಚಿದ ಆರೋಗ್ಯ ಇಲಾಖೆ ಆ
ಬಳಿಕ ಮೈಮರೆತಿತ್ತು. ಕೆಲ ಬದಲಾವಣೆಯ ಗೈಡ್ ಲೈನ್ ಹಾಗೂ ಲಾಕ್ ಡೌನ್ ಸಡಿಲಿಕೆಯಿಂದ ಜುಲೈನಲ್ಲಿ ಕಂಟ್ರೋಲ್ ತಪ್ಪಿತು. ಈಗ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ. ಸಮುದಾಯದಲ್ಲಿರುವ ಕೊರೊನಾ ಇನ್ಮುಂದೆ ಕಂಟ್ರೋಲ್ ಗೆ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ಮುಂದೆ ಮೈಲ್ಡ್ ಸಿಂಪ್ಟಮ್ಸ್ ಇರೋರನ್ನ ಟ್ರೇಸ್ ಮಾಡಿ ಕ್ವಾರಂಟೈನ್ಮಾಡಿದರು ಪ್ರಯೋಜನವಿಲ್ಲ ಅಂತಿದ್ದಾರೆ ತಜ್ಞರು.