ರಶ್ಮಿಕಾ ಮಂದಣ್ಣ.. ಕರ್ನಾಟಕದ ಕ್ರಶ್. ಚಂದದ ನಗುವಿನ ಮೂಲಕ ಮನಸೂರೆಗೊಳ್ಳುವ ಬೆಡಗಿ. ಚಂದನವನದ ಚೆಂದುಳ್ಳಿಗೆ ಇಂದು ತೆಲುಗಿನ ಟಾಪ್ ಹೀರೋಯಿನ್ ಕೂಡ! ಬೇರೆ ಬೇರೆ ಭಾಷೆಗಳಿಂದ ಆಫರ್ಗಳ ಸುರಿಮಳೆ ಸುರಿಯತ್ತಿವೆ, ಇದೀಗ ಈ ಕೊಡಗಿನ ಬೆಡಗಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ 3 ವಾಹನಗಳಲ್ಲಿ ಆಗಮಿಸಿದ 10 ಅಧಿಕಾರಿಗಳು ಕೊಡಗಿನ ಬೆಡಗಿಯ ವಿರಾಜಪೇಟೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಹೈದರಾಬಾದ್ನಲ್ಲಿ ರಶ್ಮಿಕಾ ಇದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ 2016ರಲ್ಲಿ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಟಾಲಿವುಡ್ನಲ್ಲೂ ಮಿಂಚುತ್ತಿದ್ದಾರೆ.
ಕರ್ನಾಟಕದ ಕ್ರಶ್ಗೆ ಐಟಿ ಶಾಕ್ – ಇಲ್ಲಿದೆ ದಾಳಿ ಹಿಂದಿನ ಸತ್ಯ!
Date: