ನವನೀತ್… ಸ್ಯಾಂಡಲ್ವುಡ್ನ ಯುವ ನಿರ್ದೇಶಕ. ಬಹುಶಃ ಇವರ ಪರಿಚಯ ಇಲ್ದೇ ಇರುವವರು ಬಹಳ ಕಮ್ಮಿ ಅನ್ಸುತ್ತೆ. ಚೊಚ್ಚಲ ಸಿನಿಮಾದಲ್ಲೇ ಸೈ ಎನಿಸಿಕೊಂಡ ನಿರ್ದೇಶಕ.
2016ರಲ್ಲಿ ತೆರೆಕಂಡ ಕರ್ವ ಸಿನಿಮಾವನ್ನು ನೀವೆಲ್ಲಾ ನೋಡಿದ್ದೀರಿ. ಆ ಸಸ್ಪನ್ಸ್, ಥ್ರಿಲ್ಲರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಇದೇ ನವನೀತ್ ಅವರು. ಅದು ನವನೀತ್ರವರ ಮೊದಲ ಸಿನಿಮಾ. ತಿಲಕ್ ಶೇಖರ್, ಆರ್.ಜೆ ರೋಹಿತ್ ಮೊದಲಾದವರು ನಟಿಸಿದ್ದ ಸಿನಿಮಾ ಒಳ್ಳೆಯ ಹೆಸರನ್ನು ಮಾಡಿತ್ತು. ನವನೀತ್ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ರು.
ಕರ್ವ ನಂತರ 2018ರಲ್ಲಿ ನವನೀತ್ ನಿರ್ದೇಶನದ ಬಕಾಸುರ ಸಿನಿಮಾ ಬಂತು.ಕ್ರೇಜಿಸ್ಟಾರ್ ರವಿಚಂದ್ರನ್, ಆರ್.ಜೆ ರೋಹಿತ್, ಶಶಿಕುಮಾರ್, ರಘುಭಟ್ ಮೊದಲಾದ ತಾರಾಗಣವನ್ನು ಹೊಂದಿದ್ದ ಬಕಾಸರವೂ ತಕ್ಕಮಟ್ಟಿಗೆ ಹೆಸರು ಮಾಡಿತು. ಇದೀಗ ನವನೀತ್ ಮೂರನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಬಾರಿ ಅವರು ಆ್ಯಕ್ಷನ್ ಕಟ್ ಹೇಳ್ತಿರೋದು ರಿಯಲ್ ಸ್ಟಾರ್ ಉಪೇಂದ್ರರವರಿಗೆ.
ಪ್ರೊಡ್ಯೂಸರ್ ತರುಣ್ ಶಿವಪ್ಪ ಅವರೊಂದಿಗೆ ಸಿನಿಮಾ ಮಾಡಲು ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾಕ್ಕೆ ಡೈರೆಕ್ಟರ್ ಕರ್ವ ನವನೀತ್. ಉಪ್ಪಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಐ ಲವ್ ಯು ಸಕ್ಸಸ್ನಲ್ಲಿರುವ ಉಪ್ಪಿ ಐ ಲವ್ಯು ಡೈರೆಕ್ಟರ್ ಆರ್.ಚಂದ್ರು ಅವರ ಜೊತೆ ಕಬ್ಜ ಅನ್ನುವ ಸಿನಿಮಾ ಮಾಡ್ತಿದ್ದಾರೆ. ಈ ನಡುವೆ ನವನೀತ್ ನಿರ್ದೇಶನದ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಉಪೇಂದ್ರರ ಮ್ಯಾನರಿಸಂಗೆ ತಕ್ಕಂತೆ ಬೇರೆಯದೇ ಜಾನರ್ನಲ್ಲಿ ನವನೀತ್ ಸಿನಿಮಾ ಮಾಡಲಿದ್ದಾರೆ. ಯುವ ನಿರ್ದೇಶಕರಾದ ನವನೀತ್ ತಮ್ಮ ಸಿನಿಮಾಗಳಲ್ಲಿ ಹೊಸಬರಿಗೆ ಹೆಚ್ಚು ಹೆಚ್ಚು ಅವಕಾಶ ಕೊಡ್ತಾರೆ. ಅಂತೆಯೇ ಉಪ್ಪಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಸಿನಿಮಾದಲ್ಲೂ ಹೊಸಬರನ್ನು ಪರಿಚಯಿಸಿದರೆ ಅಚ್ಚರಿ ಇಲ್ಲ.
ಸೆಪ್ಟೆಂಬರ್ 18ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ಅಂದೇ ಸಿನಿಮಾ ಟೈಟಲ್ ರಿವೀಲ್ ಆಗಲಿದ್ದು, ಅದೇ ದಿನ ಫಸ್ಟ್ ಲುಕ್ ಕೂಡ ರಿಲೀಸ್ ಆಗಲಿದೆ.