ಬೆಂಗಳೂರು: ಕಲಬುರ್ಗಿಯಲ್ಲಿ ನಡೆದ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ ಅವರ ಹತ್ಯೆ ಘಟನೆ ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಿವಿಲ್ ವ್ಯಾಜ್ಯವೊಂದರ ಸಂಬಂಧ ವಿಚಾರಣೆ ವೇಳೆ ಈರಗಣ್ಣ ಗೌಡರ ಹತ್ಯೆ ಘಟನೆಯನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರು, 20 ಎಕರೆ ಜಾಗದ ಮೇಲಿನ ಹಕ್ಕಿನ ವಿಚಾರ ಸಂಬಂಧ ಈ ಕೊಲೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೆ, ಇಂತಹ ಘಟನೆಗಳನ್ನು ಮಟ್ಟಹಾಕದೆ ಹೋದರೆ ಮುಂದಿನ 20 ವರ್ಷಗಳ ನಂತರ ಸಿವಿಲ್ ವ್ಯಾಜ್ಯಗಳು ಕೋರ್ಟ್ಗೆ ದಾಖಲಾಗುವುದು ಅನುಮಾನ, ಕೊಲೆಗಡುಕರು ಮುಂದೊಂದು ದಿನ ಶ್ರೀಸಾಮಾನ್ಯರನ್ನು ಬೆದರಿಸಿ ಸಿವಿಲ್ ವ್ಯಾಜ್ಯಗಳನ್ನು ತಾವೇ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಈ ಹೇಯ ಕೃತ್ಯಗಳು ನಿಜಕ್ಕೂ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ನುಡಿದರು.