ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್
ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನೊಳಗಿನ ಅಕ್ರಮ ಚಟುವಟಿಕೆಗಳು ದಿನದಿಂದ ದಿನಕ್ಕೆ ಬಯಲಾಗುತ್ತಿದ್ದು, ಕೈದಿಗಳ ಹೈಫೈ ಜೀವನಶೈಲಿಯ ಮತ್ತೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೈಲಿನೊಳಗೆ ಕ್ಲಬ್‌ಗಳನ್ನು ಮೀರಿಸುವಂತ ಬಿಂದಾಸ್ ಲೈಫ್ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ವೈರಲ್ ವಿಡಿಯೋದಲ್ಲಿ ಕೈದಿಗಳು ಬ್ರ್ಯಾಂಡೆಡ್ ಎಣ್ಣೆ ಸೇವನೆ, ಸಿಗರೇಟ್ ಸೇವನೆ ಹಾಗೂ ಗುಂಪು ಗುಂಪಾಗಿ ಜೂಜಾಟದಲ್ಲಿ ತೊಡಗಿರುವ ದೃಶ್ಯಗಳು ದಾಖಲಾಗಿವೆ. ಬಿಗಿ ಭದ್ರತೆಯ ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ಸರಬರಾಜಾಗುತ್ತಿವೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಈ ಎಲ್ಲ ಅಕ್ರಮಗಳ ನಡುವೆಯೂ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಮೌನ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಿನ್ನೆಯಷ್ಟೇ ಆರ್.ಡಿ. ಪಾಟೀಲ್ ಬಿಡುಗಡೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ಜೈಲ್ ಅಧಿಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ರೂ. ಲಂಚದ ಆರೋಪವನ್ನು ಅವರು ಮಾಡಿದ್ದರು.
ಇದೀಗ ನೈಲಿನಲ್ಲೇ ಕೈದಿಗಳ ಹೈಫೈ ಜೀವನಶೈಲಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ನಡೆಯುತ್ತಿರುವ ಅಂದರ್–ಬಾಹರ್ ಅಕ್ರಮ ಅಟ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.






