ಮಂಡ್ಯ: ವರುಣನ ಕೃಪೆ, ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ. ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ವರುಣನ ಕೃಪೆ, ಚಾಮುಂಡೇಶ್ವರಿ ಅನುಗ್ರಹದಿಂದ ಕಾವೇರಿಗೆ ಬಾಗಿನ ಅರ್ಪಿಸುವ ಕಾಲ ದೊರೆತಿದೆ. ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ. ಕಳೆದ ವರ್ಷ 200 ತಾಲೂಕುಗಳಲ್ಲಿ ಬರಗಾಲವಿತ್ತು.
ಕಾವೇರಿ ಪ್ರಾಧಿಕಾರ ಆದೇಶದ ಪ್ರಕಾರ 40 ಟಿಎಂಸಿ ಬಿಡಬೇಕಿತ್ತು. ಆದರೆ 20 ಟಿಎಂಸಿ ಬಿಡಲು ಹೇಳಿತ್ತು. ಅಷ್ಟನ್ನೂ ನಾವು ಬಿಡಲಿಲ್ಲ. ಕೆಲವರು ನೀರು ಬಿಟ್ಟಿದ್ದೇವೆ ಎಂದು ವಾದ ಮಾಡಿದ್ದಾರೆ. ನಾವು ಎಲ್ಲರನ್ನು ಕರೆದು ಚರ್ಚೆ ಮಾಡಿದ್ದೇವೆ. ಆನಂತರ ನೀರು ಬಿಟ್ಟಿದ್ದೇವೆ. 30 ಟಿಎಂಸಿ ನೀರು ತಮಿಳುನಾಡಿಗೆ ತಲುಪಿಸಿದ್ದೇವೆ. ಇನ್ನು ಹತ್ತು ಟಿಎಂಸಿ ನೀರು ಬಿಡಬೇಕು. ಈ ವರ್ಷದ ಕೋಟಾ ಮುಗಿಯುತ್ತದೆ. 50 ಸಾವಿರ ಕ್ಯೂಸೆಕ್ ನೀರು ಹೋಗುತ್ತಿದೆ. ಆದೇಶವನ್ನು ಪಾಲನೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಕಳೆದ ವರ್ಷ ಕಷ್ಟದಲ್ಲಿ ಇದ್ದೆವು. ಆದರೂ ರೈತರನ್ನು ಕಾಪಾಡಿದ್ದೇವೆ !
Date: