ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನಾಗಲಿ ಅಥವಾ ಸಾ ರಾ ಮಹೇಶ್ ಆಗಲಿ ಹೊಣೆಯಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ .
ಅವರು ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ, ಕಾರ್ಯಕರ್ತರ ಮನಸ್ಸುಗಳು ಕೇವಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಒಡೆದು ಹೋಗಿದೆ. ನಾವು ಇಲ್ಲಿ ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ. ಆದರೆ ಒಂದು ವೇಳೆ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾನಾಗಲಿ, ಸಾ.ರಾ. ಮಹೇಶ್ ಆಗಲಿ ಹೊಣೆಯಲ್ಲ ಅಂತ ಹೇಳಿದರು.