ಕಾಂಗ್ರೆಸ್ ಇರೋದು ಮುಸ್ಲಿಮರ ರಕ್ಷಣೆಗಾಗಿ, ಅವರ ವೋಟ್ಗಾಗಿ ಜೊಲ್ಲು ಸುರಿಸುತ್ತಾರೆ: ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಕಾಂಗ್ರೆಸ್ ಇರೋದು ಮುಸ್ಲಿಮರ ರಕ್ಷಣೆಗಾಗಿ, ಅವರ ವೋಟ್ಗಾಗಿ ಜೊಲ್ಲು ಸುರಿಸುತ್ತಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲೇ ಹಿಂದೂ ಸಂಘಟನೆ ಮುಖ್ಯಸ್ಥರ ಕೊಲೆಯಾಯಿತು.
ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಬಿಜೆಪಿ ನೆಲಕ್ಕೆ ಬಿದ್ದಿದೆ. ಯತ್ನಾಳ್ ಅವರು ಹಿಂದೂ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಯನ್ನೇ ಪ್ರಬಲ ಹಿಂದೂಪಕ್ಷ ಮಾಡೋದು ಒಳ್ಳೆಯದು.
ಯತ್ನಾಳ್ರನ್ನು ವಾಪಸಾತಿ ಮಾಡಲೇಬೇಕು. ರಾಜ್ಯ ಬಿಜೆಪಿಯಲ್ಲಿ ಭ್ರಷ್ಟಾಚಾರ ರಹಿತ, ವಂಶದ ರಹಿತ ಆಡಳಿತ ನಡೆಸುವ ಪ್ರಕ್ರಿಯೆ ಮಾಡಬೇಕು. ರಾಜ್ಯದಲ್ಲಿ ಮುಂದೆ ಬಿಜೆಪಿ ಒಳ್ಳೆಯ ಭವಿಷ್ಯಯಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನವರು ನೀತಿಗೆಟ್ಟವರು, ನೀಚ ಕಾಂಗ್ರೆಸ್ಸಿಗರು. ವಕ್ಫ್ ಬೋರ್ಡ್ ಕೆಲ ಮೌಲ್ವಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ವಕ್ಫ್ ಬೋರ್ಡ್ ಹೆಸರಿನಲ್ಲಿ ನೂರಾರು ಎಕರೆ ಲೂಟಿ ಮಾಡಿರುವ ಆರೋಪ ಹೊರಬಂದಿದೆ ಎಂದು ಕಿಡಿಕಾರಿದ್ದಾರೆ.