No menu items!
18 C
Munich
Thursday, June 18, 2026

ಕಲಬುರಗಿಯಲ್ಲಿ ಭೀಕರ ಘಟನೆ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ನೇಣಿಗೆ ಶರಣು

Must read

ಕಲಬುರಗಿಯಲ್ಲಿ ಭೀಕರ ಘಟನೆ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ನೇಣಿಗೆ ಶರಣು

ಕಲಬುರಗಿ: ಕಲಬುರಗಿಯಲ್ಲಿ ಭೀಕರ ಘಟನೆ ನಡೆದಿದೆ. ಸರ್ಕಾರಿ ನೌಕರನೋರ್ವ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ದಂಪತಿಯನ್ನು ಸಂತೋಷ್ ಕೊರಳ್ಳಿ (45), ಶೃತಿ (35), ಮಕ್ಕಳನ್ನು ಮುನಿಶ್ (9), ಮೂರು ತಿಂಗಳ ಮಗುವನ್ನು ಅನಿಶ್ ಎನ್ನಲಾಗಿದ್ದು, ಪತ್ನಿ ಹಾಗೂ ಮಕ್ಕಳನ್ನು ಮೊದಲು ಕೊಲೆ ಮಾಡಿ, ನಂತರ ಸಂತೋಷ್ ಮನೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಗಂಡ-ಹೆಂಡತಿ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ಸಂತೋಷ್ ಕೊರಳ್ಳಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -spot_img

More articles

- Advertisement -spot_img

Latest article