ಉಪಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್ ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವೂ ಆಗಿತ್ತು. ಅಧಿಕಾರ, ಪಕ್ಷದ ಚುಕ್ಕಾಣಿಗಾಗಿ ನಾಯಕರ ನಡುವೆ ಮೂಡಿದ ಪ್ರತಿಷ್ಟೆ, ಹಿರಿ-ಕಿರಿ ನಾಯಕರ ಆಂತರಿಕ ಸಂಘರ್ಷಗಳು ಕೂಡ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿತ್ತು.
ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿ ಇದರ ಲಾಭಾ ಪಡೆಯುವುದು ಖಚಿತ. ಈ ಹಿನ್ನೆಲೆ ಮುನಿಸು ಮರೆತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಇದಕ್ಕೆ ಏನು ಮಾಡಬೇಕು. ಮುಂದಿನ ನಡೆ ಹೇಗೆ ಎಂಬ ಕುರಿತು ಚರ್ಚೆ ನಡೆಸಲು ಇಂದು ನಾಯಕರನ್ನು ಪರಮೇಶ್ವರ್, ಕಾಂಗ್ರೆಸ್ ನಾಯಕರನ್ನು ಇಂದು ಸಂಜೆ ಕಾಫಿ ಪಾರ್ಟಿಗೆ ಆಹ್ವಾನಿಸಿದ್ದು ಅದರಲ್ಲಿ ಎನೆನು ಚರ್ಚೆ ನೆಡೆದಿದೆ ಎಮಬ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಅಗುತ್ತಿದೆ.