ಕಾಂಗ್ರೆಸ್ ಸಚಿವರ ಕಾಲಿಗೆ ಬಿದ್ದ ಬಿಜೆಪಿ ಸಂಸದ ಎನ್ನುವ ಹೆಡ್ಲೈನ್ ನೋಡಿದ್ರೆ ಬರೀ ಆಶ್ಚರ್ಯ ಆಗಲ್ಲ.. ಶಾಕ್ ಕೂಡ ನಿಮಗೆ ಆಗಿರುತ್ತದೆ. ಆದರೂ ಇದು ಸುಳ್ಳು ಸುದ್ದಿಯಲ್ಲ… ಸತ್ಯ…
ಮೈಸೂರಿನ ಬಿಜೆಪಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಟ್ರಬಲ್ ಶೂಟರ್ ಖ್ಯಾತಿಯ ಸಚಿವ ಡಿ.ಕೆ ಶಿವಕುಮಾರ್ ಅವರ ಕಾಲಿಗೆ ಬಿದ್ದಿದ್ದಾರೆ..! ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಹುಟ್ಟು ಹಬ್ಬ ಇತ್ತು. ಹೀಗಾಗಿ ತಮ್ಮ ಗುರು ಕೃಷ್ಣ ಅವರನ್ನು ಭೇಟಿಯಾಗಿ ವಿಶ್ ಮಾಡಲು ಡಿಕೆಶಿ ಕೃಷ್ಣ ಅವರ ಮನೆಗೆ ಹೋಗಿದ್ದರು. ಈ ಟೈಮ್ನಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಕೂಡ ಅಲ್ಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಮತ್ತು ಪ್ರತಾಪ್ ಸಿಂಹ ಮುಖಾಮುಖಿ ಆಗಿದ್ದಾರೆ. ಆಗ ಪ್ರತಾಪ್ ಸಿಂಹ ಹಿರಿಯರಾದ ಡಿ.ಕೆ ಶಿವಕುಮಾರ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರೂ ಕೂಡ ಪ್ರೀತಿಯಿಂದ, ನಗುಮೊಗದಿಂದ ಪ್ರತಾಪ್ ಸಿಂಹ ಅವರಿಗೆ ಆಶೀರ್ವಾದ ಮಾಡಿದ್ದಾರೆ.
ಪಕ್ಷ ಸಿದ್ಧಾಂತಗಳು ಏನೇ ಇರಲಿ.. ವೈಯಕ್ತಿಕ ಪ್ರೀತಿ, ಗೌರವ ಸಂಬಂಧಗಳು, ಸಂಪ್ರದಾಯ, ಸಂಸ್ಕೃತಿ ದೊಡ್ಡದು ಎನ್ನುವುದನ್ನು ಈ ಘಟನೆ ಸಾರುತ್ತದೆ ಅಲ್ಲವೇ? ಪ್ರತಾಪ್ ಸಿಂಹ ಮತ್ತು ಡಿಕೆಶಿ ಪಕ್ಷ, ರಾಜಕೀಯ ಎಂದು ಬಂದರೆ ಬದ್ಧ ವೈರಿಗಳು. ಆದರೆ, ಇಂಥಾ ಸನ್ನಿವೇಶ ರಾಜಕೀಯ ಮೀರಿದ ಬಂಧವನ್ನು ತೋರಿಸುತ್ತದೆ.
ಕಾಂಗ್ರೆಸ್ ಸಚಿವರ ಕಾಲಿಗೆ ಬಿದ್ದ ಬಿಜೆಪಿ ಸಂಸದ..!
Date: