ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸ್ತಿದ್ರು. ಈರುಳ್ಳಿ ಬೋಂಡ ಬೇಯಿಸಿ, ಈರುಳ್ಳಿ ಹಾರ ಹಾಕಿಕೊಂಡು ಪ್ರತಿಭಟನೆ ನಡೆಸ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ರು ಇದೇ ಸಂದರ್ಭದಲ್ಲಿ ಅಲ್ಲಿಂದ ಹೊರಡುತ್ತಿದ್ದ ಶೋಭಾ ಕರಂದ್ಲಾಜೆ ಅವರ ಕಾರನ್ನು ಅಡ್ಡಗಟ್ಟಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಎದುರು ಈ ಘಟನೆ ನಡೆದಿದ್ದು, ಈರುಳ್ಳಿ ಹಾರ ಹಾಕಲು ಬರುತ್ತಿದ್ದಂತೆ ಶೋಭಾ ಕೈಯಿಂದ ಹಾರವನ್ನ ದೂಡಿದ್ದು, ಕಾರ್ ಮುಂದೆ ನಡೆದಿದೆ.
ಈ ವೇಳೆ ಹಾರ ಹಾಕಲು ಬಂದ ಕೈ ಕಾರ್ಯಕರ್ತೆಯ ಮುಖಕ್ಕೆ ಪೆಟ್ಟಾಗಿದೆ. ಈ ಕಾರಣಕ್ಕೆ ಶೋಭಾ ವಿರುದ್ಧ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ಶೋಭಾ ಕರಂದ್ಲಾಜೆ ಕೈ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ.