ಕಾಣೆಯಾದ ಮೀನುಗಾರರು ಜೀವಂತವಾಗಿ ಬರಲ್ಲಿದ್ದಾರೆ..! ಬೊಬ್ಬರ್ಯ ದೈವದ ಭವಿಷ್ಯ..
ಮಲ್ಪೆಯಿಂದ ಮೀನುಗಾರಿಕೆಗೆಂದು ತೆರಳಿದ್ದ 7 ಮೀನುಗಾರರು ಕಣ್ಮರೆಯಾಗಿದ್ದಾರೆ.. ಇವರ್ಯಾರ ಬಗ್ಗೆಯೂ ಇನ್ನು ಯಾವುದೇ ಮಾಹಿತಿ ತಿಳಿದು ಬಂದಿಲ್ಲ.. ಈ ಮೀನುಗಾರರನ್ನ ಹುಡುಕು ಪ್ರಯತ್ನಗಳ ನಡೆಯುತ್ತಿದ್ದರು ಯಾವುದೇ ಸುಳಿವು ಮಾತ್ರ ಸಿಗುತ್ತಿಲ್ಲ.. ಹೀಗಾಗೆ ಮೀನುಗಾರರ ಕುಟುಂಬ ವರ್ಗ ಆತಂಕದಲ್ಲಿದೆ..
ಇನ್ನು ಈ ಬಗ್ಗೆ ಗ್ರಾಮದ ಜನತೆ ಬುಧವಾರ ಬೊಬ್ಬರ್ಯ ದೈವದ ಮೊರೆ ಹೋಗಿದ್ರು.. ಈ ಬಗ್ಗೆ ದೈವ, ಎಲ್ಲರು ಜೀವಂತವಾಗಿ ಬೇರೆ ರಾಜ್ಯದಲ್ಲಿದ್ದಾರೆ. ಉತ್ತರ ಭಾಗದಲ್ಲಿ ದಟ್ಟ ಪೊದೆಗಳ ಮಧ್ಯೆ ದುಷ್ಟರು ಬಂಧನದಲ್ಲಿರಿಸಿದ್ದಾರೆ. ಅಲ್ಲಿಗೆ ಮನುಷ್ಯ ಹೋಗುವ ಹಾಗಿಲ್ಲ. ರಾತ್ರಿ ಬಿಟ್ಟು ಹಗಲೂ ಅಲ್ಲಿಗೆ ಹೋಗುವುದು ಅಪಾಯಕಾರಿ. ಹುಡುಕಾಟಕ್ಕೆ ಸರಕಾರದ ಪ್ರಯತ್ನ ಸಾಕಾಗುತ್ತಿಲ್ಲ. ಉನ್ನತ ಮಟ್ಟದಲ್ಲಿ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಲಿ, ಅದರ ಹಿಂದೆ ನಾನಿದ್ದು ಅವರೆಲ್ಲರನ್ನೂ ಬರಮಾಡಿ ಕೊಳ್ಳುತ್ತೇನೆ ಎಂದು ಬೊಬ್ಬರ್ಯ ದೈವ ನುಡಿದಿದೆ ಎನ್ನಲಾಗಿದೆ.