ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಯುವಕನೋರ್ವ ಸಾವನ್ನಪ್ಪಿದ ನಂತರ ಇದೀಗ ಎಲ್ಲೆಡೆ ಟ್ರಾಫಿಕ್ ಪೊಲೀಸರ ಮೇಲೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇದಾದ ಬೆನ್ನಲ್ಲೇ ಇದೀಗ ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ಸಭೆಯನ್ನು ಕರೆದು ಯಾವುದೇ ಕಾನ್ ಸ್ಟೆಬಲ್ ಅಡ್ಡಹಾಕಿ ಫೈನ್ ವಸೂಲಿ ಮಾಡಲು ಬಂದರೆ ಅವರಿಗೆ ಫೈನ್ ಕೊಡಬೇಡಿ ಏಕೆಂದರೆ ಕಾನ್ಸ್ಟೆಬಲ್ಗಳಿಗೆ ವಾಹನ ತಪಾಸಣೆ ನಡೆಸಿ ದಂಡವನ್ನು ವಸೂಲಿ ಮಾಡುವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.
ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಇದ್ದರೆ ಮಾತ್ರ ದಂಡವನ್ನು ವಸೂಲಿ ಮಾಡಬಹುದು ಸ್ಥಳದಲ್ಲಿ ಹಣ ಇಲ್ಲದಿದ್ದರೆ ಚಲನ್ ನೀಡುವ ಮುಖಾಂತರ ವಾಹನ ಸವಾರರನ್ನು ಮತ್ತು ಬೈಕ್ ಅನ್ನು ಬಿಟ್ಟು ಕಳುಹಿಸಬೇಕು ಅದನ್ನು ಬಿಟ್ಟು ಬೈಕ್ ಎತ್ತಿಕೊಂಡು ಹೊಗುವುದನ್ನು ಮಾಡುವಂತಿಲ್ಲ ಎಂದು ಹೇಳಿದ್ದಾರೆ.