ಕೋಲ್ಕತ್ತಾ : ಮಹಿಳೆಯನ್ನು ಅತ್ಯಾಚಾರಿಯಿಂದ ರಕ್ಷಿಸಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಸುಮಾರು 15 ಕಿ ಮೀ ಚೇಸ್ ಮಾಡಿದ್ದಾರೆ.
ಪೂರ್ವ ಬುದ್ವಾನಿನ ಗುಸ್ಕರಾದಲ್ಲಿ ಸ್ವಯಂ ಸೇವಕ ಬಿಕಾಶ್ ಗೊರಾಯಿ ಗಸ್ತು ತಿರುಗುತ್ತಿದ್ದಾಗ ಲಾರಿಯ ಕ್ಯಾಬಿನ್ನಿಂದ ಮಹಿಳೆ ಕಿರುಚುತ್ತಿದ್ದ ಧ್ವನಿ ಕೇಳಿಸಿದೆ. ಆಗ ಚಾಲಕನನ್ನು ಹೊರಗೆ ಬರುವಂತೆ ತಿಳಿಸಿದ್ದಾರೆ. ಚಾಲಕ ಇದ್ದಕ್ಕಿದ್ದಂತೆ ವಾಹನವನ್ನು ಚಲಾಯಿಸಿದ್ದಾನೆ. ಬಿಕಾಶ್ ಲಾರಿಯನ್ನು ಹಿಂಬಾಲಿಸಿ, ಬಳಿಕ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಲಾರಿ ನೋಂದಣಿ ಸಂಖ್ಯೆ ತಿಳಿಸಿದ್ದಾರೆ. ಎಸ್ ಯು ವಿ ಕಾರಿನಲ್ಲಿ ಚೇಸ್ ಮಾಡಿದ್ದಾರೆ.
30 ವರ್ಷದ ಕಿವುಡ, ಮೂಗ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಕಿಡ್ನ್ಯಾಪ್ ಮಾಡಿದ್ದೆವು ಎಂದು ಬಂಧಿತ ಲಾರಿ ಚಾಲಕ ಅಬ್ದುಲ್ ಶೇಖ್ ತಪ್ಪೊಪ್ಪಿಕೊಂಡಿದ್ದಾನೆ.
ಕಾಮುಕನಿಂದ ಮಹಿಳೆಯನ್ನು ರಕ್ಷಿಸಲು ಪೊಲೀಸರಿಂದ ಸಿನಿಮೀಯ ರೀತಿಯ ಚೇಸಿಂಗ್
Date: