ಕಾರನ್ನು ಹಳ್ಳಕ್ಕೆ ಹಾಕಿದ್ದಾಳೆ. ಅವಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿಯೇ ಪತ್ನ ವಿರುದ್ಧ ಕಂಪ್ಲೇಂಟ್ ಕೊಟ್ಟರಾ ಎಂದು ಆಶ್ಚರ್ಯ ಪಡ್ತಿದ್ದೀರಾ.? ನಂಬಲು ಕಷ್ಟವಾದರೂ ನೀವು ಅದನ್ನು ನಂಬಲೇ ಬೇಕು.
ಕಾರನ್ನು ಹಳ್ಳಕ್ಕೆ ಉರುಳಿಸಿದ ಪತ್ನಿಯ ವಿರುದ್ಧ ಪತಿ ದೂರು ದಾಖಸಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ಉಡುಪಿ ನಿವಾಸಿ ನಾಗರಾಜ್ ತನ್ನ ಪತ್ನಿ ವಿರುದ್ಧ ದೂರು ನೀಡಿದವರು. ಮಂಜುಳ ಆರೋಪಿ ಪತಿಯಿಂದ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾದವರು. ಪತ್ನಿ ಅಜಾಗರುಕತೆಯಿಂದ, ವೇಗವಾಗಿ, ಮನಸೋ ಇಒಚ್ಛೆ ಕಾರನ್ನು ಓಡಿಸಿದ್ದರಿಂದ ಹಳ್ಳಕ್ಕೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಮಗ, ಮಗಳು ಅತ್ತಿಗೆಗೆ ಗಾಯಗಳಾಗಿವೆ. ಆದ್ದರಿಂದ ಪತ್ನಿಯ ಈ ಕೂಡಲೇ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಾಜ್ ಆಗ್ರಹಿಸಿದ್ದಾರೆ.
ನಾಗರಾಜ್ ಅವರು ಬಾವ ಪ್ರಭಾಕರ ಮೆಸ್ತಾರ ಬ್ರೀಜಾ ಕಾರಿನಲ್ಲಿ ಪತ್ನಿ ಮಂಜುಳಾ, ಮಗ ಈಶಾನ್ (8), ಪತ್ನಿ ಅಕ್ಕ ಸುಮನಾ ಹಾಗೂ ಅವರ ಮಗಳು ಸುಪ್ರಭಾ (12) ಜೊತೆ ಸಾಗರಕ್ಕೆ ತೆರಳುತ್ತಿದ್ದರು. ನಾಗರಾಜ್ ಅವರ ಪತ್ನಿ ಮಂಜುಳಾ ಕಾರು ಚಲಾಯಿಸುತ್ತಿದ್ದರು. ಹೊಸನಗರದ ರಾಮಚಂದ್ರಪುರ ಗ್ರಾಮದ ಶರಾವತಿ ಸೇತುವೆಯ ಸಮೀಪ ಕಾರು ಹಳ್ಳಕ್ಕೆ ಬಿದ್ದಿದೆ. ಪತ್ನಿ ವೇಗವಾಗಿ, ಅಜಾಗರುಕತೆಯಿಂದ ಕಾರು ಚಾಲನೆ ಮಾಡಿದ್ದರಿಂದಲೇ ಅಪಘಾತವಾಗಿದೆ. ಅವಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾಗರಾಜ್ ದೂರಿನಲ್ಲಿ ತಿಳಿಸಿದ್ದಾರೆ. ಮಂಜುಳಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.