ಭಾರತಕ್ಕೆ 3ನೇ ವಿಶ್ವಕಪ್ ಗೆದ್ದು ತರಲೆಂದು ಇಂಗ್ಲೆಂಡ್ಗೆ ತೆರಳಿತ್ತು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ. ಆರಂಭದಿಂದಲೂ ಪಕ್ಕಾ ನಮ್ದೇ ವಿಶ್ವಕಪ್ ಎಂದು ಸಾರುವಂತೆ ಉತ್ತಮ ಪ್ರದರ್ಶನವನ್ನು ನೀಡಿತ್ತು. ಗಾಯದ ಸಮಸ್ಯೆ ಕಾಡಿದರೂ ಗೆಲುವು ನಮ್ಮದೇ ಎಂದು ಭಾರತ ಖಾತ್ರಿ ಪಡಿಸಿತ್ತು.
ಇಂಗ್ಲೆಂಡ್ ವಿರುದ್ಧ ಸೋತಿದ್ದು ಬಿಟ್ಟರು, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಿಂದ ಆರಂಭವಾದ ಭಾರತದ ಗೆಲುವಿನ ಅಭಿಯಾನ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ ಎನ್ನುವಂತಿತ್ತು. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧದ ಲೀಗ್ ಮ್ಯಾಚ್ ಮಳೆಯಿಂದ ರದ್ದಾಗಿತ್ತು. ಇಂಗ್ಲೆಂಡ್ ವಿರುದ್ಧ ಮಾತ್ರ ಭಾರತ ಸೋತಿತ್ತು. ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆರಾಮಾಗಿ ಗೆದ್ದು ಫೈನಲ್ ಪ್ರವೇಶಿಸುತ್ತೆ.. ಫೈನಲ್ನಲ್ಲಿ ಪಕ್ಕಾ ಭಾರತ ಗೆಲ್ಲುತ್ತೆ ಎಂದೇ ಕೊಟ್ಯಂತರು ಮಂದಿ ಆಸೆ ಇಟ್ಟುಕೊಂಡಿದ್ದರು. ಆದರೆ, ಆಗಿದ್ದೇ ಬೇರೆ. ನ್ಯೂಜಿಲೆಂಡ್ ವಿರುದ್ಧ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಕೇವಲ 1ರನ್ ಮಾಡಿಯಷ್ಟೇ ಪೆವಿಲಿಯನ್ ಸೇರಿಕೊಂಡ್ರು. ಧೋನಿ, ಜಡೇಜಾ ಹೋರಾಡಿದ್ರೂ ಗೆಲುವು ಸಾಧ್ಯವಾಗಿಲ್ಲ.
ಈಗ ವಿಶ್ವಕಪ್ ಸೆಮಿಫೈನಲ್ನಿಂದ ಟೀಂ ಇಂಡಿಯಾ ಹೊರ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಆಯ್ಕೆ ಸಮಿತಿ ಹೆಚ್ಚು ಒತ್ತು ನೀಡಲು ಯೋಚನೆ ಮಾಡಿದೆ. ಮುಂದಿನ ಟಿ-20ವಿಶ್ವಕಪ್ ಗಮನದಲ್ಲಿಟ್ಕೊಂಡು ದಿನೇಶ್ ಕಾರ್ತಿಕ್ ಹಾಗೂ ಕೇಧಾರ್ ಜಾಧವ್ ಮುಂಬರುವ ಮ್ಯಾಚ್ಗಳಲ್ಲಿ ತಂಡದಲ್ಲಿ ಸ್ಥಾನ ಕಳೆದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಕನಿಷ್ಠ 2 ವರ್ಷಗಳ ಮೊದಲು ತಂಡಗಳನ್ನು ಸಿದ್ಧಪಡಿಸಬೇಕಿದ್ದು. ಎಂಎಸ್ಕೆ ಪ್ರಸಾದ ನೇತೃತ್ವದ ಆಯ್ಕೆ ಸಮಿತಿ ಈ ಹಿನ್ನೆಲೆಯಲ್ಲಿ ಆದಷ್ಟು ವೇಗ ಟಿ20 ವರ್ಲ್ಡ್ಕಪ್ ಗೆ ಟೀಮ್ ರೆಡಿಮಾಡಲು ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ಜಾಧವ್ ಹಾಗೂ ಕಾರ್ತಿಕ್ಗೆ ಕೋಕ್ ನೀಡಲಾಗುತ್ತದೆ. ಕನ್ನಡಿಗರಾದ ಮನೀಷ್ ಪಾಂಡೆ. ಮಯಾಂಕ್ ಅಗರ್ವಾಲ್ ಅದೇರೀತಿ ಶ್ರೇಯಸ್ ಅಯ್ಯರ್, ನವದೀಪ್ ಸೈನಿ, ಅಲ್ರೌಂಡರ್ ಕೃಣಾಲ್ ಪಾಂಡ್ಯ ಸಂಜು ಸ್ಯಾಮ್ಸನ್ ಮೊದಲಾದ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಂಜು ಸ್ಯಾಮ್ಸನ್ ಬಗ್ಗೆ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಆದ್ದರಿಂದ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ನಿರೀಕ್ಷಿಸ ಬಹುದು.