ಕಾರ್ಮಿಕ ಶಿಲ್ಪಕಲಾಕಾರರಾದ ಇಂಟ್ರೆಸ್ಟಿಂಗ್ ಸ್ಟೋರಿ..

Date:

ಸುದರ್ಶನ್ ಪಟ್ನಾಯಕ್ . ಇವರ ಹೆಸರು ಹೇಳಿದರೆ ಇಂದು ನಮ್ಮ ಕಣ್ಣಮುಂದೆ ಅದ್ಭುತ ಮರಳಿನ ಶಿಲ್ಪಗಳು ಒಮ್ಮೆ ಪಾಸಾಗಿ ಹೋಗುತ್ತವೆ. ಅಬ್ದುಲ್ ಕಲಾಂ, ಸಚಿನ್ ನಿವೃತ್ತಿಗೊಂಡಾಗ ವಿಶಿಷ್ಟವಾಗಿ ರಚಿಸಿದ ಶಿಲ್ಪ, ಹೀಗೆ ಸುದರ್ಶನ್ ಸಾಕಷ್ಟು ಮರಳಿನ ಶಿಲ್ಪಗಳನ್ನು ರಚಿಸಿದ್ದಾರೆ.
ಎಳೆಯ ವಯಸ್ಸಿನಿಂದಲೂ ಚಿತ್ರಗಳನ್ನು ಬರೆಯುವುದು ಎಂದರೆ ಏನೋ ಖುಷಿ, ಸಂತೋಷ. ಆದರೆ ಬಣ್ಣಗಳನ್ನು ಕೊಳ್ಳಲು ಹಣದ ಕೊರತೆ ಕಾಡುತ್ತಿತ್ತು. ಆಗಲೇ ಕಂಡಿದ್ದು ಮನೆಯ ಮುಂದಿನ ಬೀಚ್ನಲ್ಲಿದ್ದ ಮರಳು. ಅದನ್ನೇ ಬಳಸಿಕೊಂಡು ಶಿಲ್ಪಗಳನ್ನು ರಚಿಸಿದರೆ ಹೇಗೆ ಎಂದು ಯೋಚಿಸಿ ಸಣ್ಣ ಪ್ರಯತ್ನವನ್ನು ಆರಂಭಿಸಿದರು.ಆಗ ಸುದರ್ಶನ್ ಅವರಿಗೆ ಬರೀ 9 ವರ್ಷ. ಇನ್ನು ವರ್ಷಗಳು ಉರುಳುತ್ತಿದ್ದಂತೆ ಸುದರ್ಶನ್ ಅವರಿಗೆ ಮರಳು ಶಿಲ್ಪ ರಚನೆ ಸುಲಲಿತವಾಗಿ ಒಲಿಯಿತು.
ಸುದರ್ಶನ್ ಪಟ್ನಾಯಕ್ ಅವರದು ಬೆಂಗಾಲಿ ಕುಟುಂಬ. ಬಾಲ್ಯದಲ್ಲಿ ಕಡುಬಡತಮ. 6ನೇ ತರಗತಿ ಓದುತ್ತಿದ್ದಾಗಲೇ ಅಂದರೆ 10ನೇ ವಯಸ್ಸಿನಲ್ಲೇ ಬಾಲ ಕಾರ್ಮಿಕನಾಗಿ ಅಲ್ಲಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಮೂವರು ಸಹೋದರನ್ನು ಸಾಕಬೇಕಿತ್ತು. ಕೂಲಿಕೆಲಸ ಮಾಡುತ್ತಲೇ ಕಲೆಯ ಬಗ್ಗೆ ಆಸಕ್ತಿಹೊಂದಿ, ಇಂದು ಮೇರು ಕಲಾವಿದರಾಗಿ ವಿಶ್ವವಿಖ್ಯಾತರಾಗಿದ್ದಾರೆ.

ಮರಳು ಶಿಲ್ಪವನ್ನು ರಚಿಸುವುದು ಸಾಮಾನ್ಯದ ಸಂಗತಿಯಲ್ಲ, ಆದರೂ ಯಾವುದೇ ಶಾಲೆಗೆ ಹೋಗದೆ ಸುದರ್ಶನ್ ಇದನ್ನು ಕಲಿತಿದ್ದಾರೆ. ಮಾಹಿತಿ ಪ್ರಕಾರ ಭಾರತದಲ್ಲಿ ಮರಳಿನ ಬಗ್ಗೆ ಕಲಿಸುವಂಥಹ ಯಾವುದೇ ವಿದ್ವಾಂಸರಿಲ್ಲ; ವಿದ್ಯಾಸಂಸ್ಥೆಗಳು ಇಲ್ಲ. ನಿರಂತರ ಕಲಿಕೆಯಿಂದ ಸುದರ್ಶನ್ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ.
ಮರಳಿನಲ್ಲಿ ಶಿಲ್ಪಗಳನ್ನು ರೂಪಿಸುವುದು ಸಾಮಾನ್ಯವಾದ ಮಾತಲ್ಲ; ಸುದರ್ಶನ್ ಅವರಿಗೆ ಇದು ನಿರಂತರ ಅಭ್ಯಾಸದಿಂದ ಬಂದಿದೆ. ಸುದರ್ಶನ್ ಅವರು ಆರಂಭದಲ್ಲಿ ಇದಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡಿದ್ದಂತೆ. ಆದರೆ, ಇಂದಿನ ನನ್ನ ಯಶಸ್ಸು ಅದನ್ನೆಲ್ಲಾ ಮುಚ್ಚಿ ಹಾಕಿದೆ. ಶಾಲೆಯೊಂದನ್ನು ತೆರೆಯುವ ಆಲೋಚನೆಯಿದೆ.
ನೋಡಿ, ಸುದರ್ಶನ್ ಅವರ ಬಾಲ್ಯದ ಬದುಕು ಅತ್ಯಂತ ಕಠೋರ. ಅದು, ಒಬ್ಬ ಬಾಲ ಕಾರ್ಮಿಕನಾಗಿ ಜೀವನದ ಬಂಡಿ ಎಳೆಯಲು ಹರಸಾಹಸಪಡುತ್ತಿದ್ದ ದಿನಗಳು. ಒಂದು ಕಾಲದಲ್ಲಿ ಕಡು ಬಡತನದಿಂದ ಬಳಲಿದ್ದೇನೆ. ಆ ಸಮಯದಲ್ಲಿ ದೇವರು ಈ ಕಲೆಯನ್ನು ವರವನ್ನಾಗಿ ನೀಡಿದ ಎಂದು ಆ ಕಾಲದ ದಿನಗಳನ್ನು ಇಂದಿಗೂ ಸ್ಮರಿಸುತ್ತಾರೆ ಸುದರ್ಶನ್ ಪಟ್ನಾಯಕ್.
ಮರಳಿನ ಶಿಲ್ಪಗಳನ್ನು ಮಾಡುವುದು ತುಂಬ ಕಷ್ಟದ ಕೆಲಸ, ಇದೊಂಥರ ಚಾಲೆಂಜಿಂಗ್ ಆರ್ಟ್. ಶಿಲ್ಪಿಗಳು ಎಷ್ಟೇ ಎಚ್ಚರಿಕೆಯಿಂದ ಶಿಲ್ಪಗಳನ್ನು ಕಟ್ಟಿದಂತೆಲ್ಲಾ, ಅದು ಕೆಳಗೆ ಬೀಳುತ್ತಾ ಹೋಗುತ್ತದೆ. ಹವಾಮಾನವೂ ಮರಳು ಕಲೆಗೆ ಸಹಕಾರಿಯಾಗಿರಬೇಕು. ಆ ಕಾರಣಕ್ಕಾಗಿಯೇ ಮರಳು ಕಲಾವಿದರು ವಿಶ್ವದಲ್ಲಿ ಸಾಕಷ್ಟು ಕಡಿಮೆ ಇರುವುದು ಎನ್ನುತ್ತಾರೆ ಅವರು.
ಮೇರು ಕಲಾವಿದರಾದ ಸುದರ್ಶನ್ ಪಟ್ನಾಯಕ್ ಅವರ ಕಲೆಗೆ ಭಾರತದಲ್ಲಿ ತಕ್ಕ ಬೆಂಬಲ ಮತ್ತು ಪ್ರೋತ್ಸಾಹ ದೊರೆಯುತ್ತಿದೆ. ಅದರಂತೆ ಅವರು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಎಲ್ಲೆಡೆಯಿಂದಲೂ ಸೈ ಎನಿಸಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ರಷ್ಯಾದ ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ಮರಳು ಶಿಲ್ಪ ಸ್ಪರ್ಧೆಯಲ್ಲಿ 40 ದೇಶಗಳ ಸ್ಪರ್ಧಿಗಳ ನಡುವೆ ಸುದರ್ಶನ್ ಅವರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚು ಮಾಡಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಸುದರ್ಶನ್ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಶಭಾಷ್ ಗಿರಿ ಪಡೆದಿದ್ದಾರೆ.
ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಪ್ರತಿಭಾವಂತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದಕ್ಕೆ ಸುದರ್ಶನ್ ಪಟ್ನಾಯಕ್ ಮತ್ತು ಅವರ ಕಲೆಯೇ ಸಾಕ್ಷಿ. ಅವರ ಕಲಾವಂತಿಕೆ ಇಂದಿನ ಯುವ ಜನರಿಗೆ ಸ್ಫೂರ್ತಿಯ ಸೆಲೆ. ಇಂದು ಶಿಲ್ಪ ಕಲಾಕಾರ..!

ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಪ್ರತಿಭಾವಂತ ಕಲಾವಿದರಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದಕ್ಕೆ ಸುದರ್ಶನ್ ಪಟ್ನಾಯಕ್ ಮತ್ತು ಅವರ ಕಲೆಯೇ ಸಾಕ್ಷಿ. ಅವರ ಕಲಾವಂತಿಕೆ ಇಂದಿನ ಯುವ ಜನರಿಗೆ ಸ್ಫೂರ್ತಿಯ ಸೆಲೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...