ಅಮ್ಮನಿಂದಾಗಿ ಅವರು ಜಗತ್ತಿಗೇ ಬೆಳಕು ನೀಡಿದ್ರು..!

0
99

ಅವತ್ತೊಂದು ದಿನ ಟೀಚರ್ ಆ ಹುಡುಗನಿಗೆ ಒಂದು ಪತ್ರವನ್ನು ಕೊಟ್ರು, ನೀನು ಇದನ್ನು ನಿನ್ನ ಅಮ್ಮನಿಗೆ ಕೊಡು ಎಂದು ಹೇಳಿದ್ರು..! ಎಂದಿನಂತೆ ಶಾಲೆಯಿಂದ ಮನೆಗೆ ಮರಳಿದ ಹುಡುಗ ಪತ್ರವನ್ನು ತಾಯಿಗೆ ನೀಡಿ, ‘ಅಮ್ಮಾ ಟೀಚರ್ ಈ ಪತ್ರವನ್ನು ನಿಂಗೆ ನೀಡಲು ಹೇಳಿದ್ದಾರೆ’ ಅಂದ.


ಆ ತಾಯಿ ಪತ್ರವನ್ನು ತೆರೆದು, ‘ನಿಮ್ಮ ಮಗ ತುಂಬಾ ಬುದ್ಧಿವಂತನಿದ್ದಾನೆ. ನಮ್ಮ ಶಾಲೆ ಅವನ ಬುದ್ಧಿಮತ್ತೆಗೆ ತುಂಬಾ ಚಿಕ್ಕದು. ಅವನಿಗೆ ಕಲಿಸಬಲ್ಲ ಯಾವ ಅರ್ಹತೆಯೂ ನಮ್ಮಲ್ಲಿನ ಯಾವ ಉಪಾಧ್ಯಾಯರಿಗೂ ಇಲ್ಲ..! ಆದ್ದರಿಂದ ಅವನಿಗೆ ನೀವು ಮನೆಯಲ್ಲೇ ನೀವು ವಿದ್ಯಾಭ್ಯಾಸ ನೀಡುವುದು ಒಳಿತು’ ಎಂದು ಮಗನಿಗೆ ಕೇಳಿದಂತೆ ಗಟ್ಟಿಯಾಗಿ ಓದಿದರು.
ಇದಾಗಿ ಅನೇಕ ವರ್ಷಗಳ ನಂತರ ಆ ಹುಡುಗನ ತಾಯಿ ವಿಧಿವಶರಾದರು. ಆ ವೇಳೆಯಲ್ಲಿ ಆ ಹುಡುಗ ವಿಶ್ವದ ಅಗ್ರಮಾನ್ಯ ವಿಜ್ಞಾನಿಯಾಗಿದ್ದರು..!
ತನ್ನ ತಾಯಿಯ ಪೆಟ್ಟಿಗೆಯನ್ನು ತೆರೆದು ಹಳೆಯ ವಸ್ತುಗಳನ್ನು ಪರಿಶೀಲಿಸ್ತಾ ಇರುವಾಗ. ವಿಶ್ವ ಶ್ರೇಷ್ಠ ವಿಜ್ಞಾನಿಗೆ ಮಡಚಿದ ಕಾಗದವೊಂದು ಕಣ್ಣಿಗೆ ಬಿತ್ತು..! ಅದನ್ನು ಬಿಡಿಸಿ ನೋಡಿದರು.. ಅದರಲ್ಲಿ ಏನ್ ಬರೆದಿತ್ತು ಗೊತ್ತಾ..?
‘ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ. ಅವನನ್ನು ಇನ್ನುಮುಂದೆ ಶಾಲೆಗೆ ಕಳುಹಿಸಬೇಡಿ’ ಎಂದು ಆ ಪತ್ರದಲ್ಲಿ ಬರೆದಿತ್ತು..! ಆ ವಿಜ್ಞಾನಿ ಬೇರಾರು ಅಲ್ಲ ‘ಥಾಮಸ್ ಅಲ್ವಾ ಎಡಿಸನ್’..!
ಥಾಮಸ್ ಅಲ್ವಾ ಎಡಿಸನ್ ಚಿಕ್ಕವರಿದ್ದಾಗ.. ಅವರ ತಾಯಿಗೆ ಪತ್ರ ಬರೆದ ಟೀಚರ್, ನಿಮ್ಮ ಮಗ ದಡ್ಡ ಅವನು ಶಾಲೆಗೆ ಬರುವುದು ಬೇಡ ಎಂದು ಹೇಳಿದ್ದರು..! ಆದರೆ, ತಾಯಿ ತನ್ನ ಚಿಕ್ಕ ಮಗುವಿಗೆ ಈ ವಿಷಯವನ್ನು ಹೇಳಿದ್ರೆ ನೋವಾಗುತ್ತೆ ಅಂತ ನೀನು ತುಂಬಾ ಬುದ್ಧಿವಂತ ನಿನಗೆ ಕಲಿಸೋ ಸಾಮಾಥ್ರ್ಯ ನಿಮ್ಮ ಶಿಕ್ಷಕರಿಗಿಲ್ಲವಂತೆ ಎಂದು ಹೇಳಿ, ಮನೆಯಲ್ಲೇ ಪಾಠ ಮಾಡಿದ್ರು..! ಆಮೇಲಿದ್ದು ಇತಿಹಾಸ.. ಥಾಮಸ್ ಅಲ್ವಾ ಎಡಿಸನ್ ಇಡೀ ಜಗತ್ತಿಗೇ ಗೊತ್ತಿದೆ..!
ಥಾಮಸ್ ಅಲ್ವಾ ಎಡಿಸನ್ ಒಂದ್ ಕಡೆ ಹೇಳ್ತಾರೆ.. ‘ಬುದ್ಧಿಮಾಂದ್ಯ ಹುಡುಗನೊಬ್ಬ ಅವನ ಶ್ರೇಷ್ಠ ಮಾತೆಯಿಂದಾಗಿ ಶತಮಾನದ ಬುದ್ಧಿವಂತನಾಗಿದ್ದಾನೆ’ ಎಂದು.


ಹೀಗೆ ಶ್ರೇಷ್ಠ ತಾಯಿಯಿಂದ ಜಗತ್ತಿಗೆ ಸರ್ವಶ್ರೇಷ್ಠ ವಿಜ್ಞಾನಿಯೊಬ್ಬರು ಲಭ್ಯರಾದ್ರು..! ಅವತ್ತು ಎಡಿಸನ್ ಅವರ ತಾಯಿ ಟೀಚರ್ ಮಾತಿಗೆ ಓಗೊಟ್ಟು, ಮಗನಿಗೆ ಬೈದಿದ್ದಾರೆ.. ಅವರೂ ಕೂಡ ಮಗನನ್ನು ನಿರ್ಲಕ್ಷಿಸಿದ್ದರೆ..ಎಡಿಸನ್ ದೊಡ್ಡ ವಿಜ್ಞಾನಿಯೇ ಆಗುತ್ತಿರಲಿಲ್ಲ..!
ದೊರೆಯುವ ಪ್ರೋತ್ಸಾಹ ವ್ಯಕ್ತಿಯನ್ನು ಎಲ್ಲಿಗೋ, ಎಷ್ಟೋ ಎತ್ತರಕ್ಕೆ ಕರೆದುಕೊಂಡು ಹೋಗುತ್ತೆ..!
ಎಡಿಸನ್ ಅವರ ಈ ಸ್ಟೋರಿ ನಿಮಗೆ ಈಗಾಗಲೇ ಗೊತ್ತಿತ್ತೇನೊ.. ಒಂದ್ಸಲ ನೆನಪು ಮಾಡಿದ್ದೇವಷ್ಟೇ..!

LEAVE A REPLY

Please enter your comment!
Please enter your name here