“ಕಾವೇರಿ ನೀರು ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಮ್ಮ ಪಕ್ಷ ಬೆಂಬಲ ನೀಡುತ್ತದೆ” ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡ ಹೇಳಿದರು.
ಗುರುವಾರ ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡ, “ಮೈಸೂರಿನಲ್ಲಿ ರಾಜಕೀಯ ಮಾಡುವುದಕ್ಕೆ ಬಂದಿಲ್ಲ. ನನ್ನ ಮೇಲೆ ತಪ್ಪು ತಿಳಿಯಬೇಡಿ. ಆ ರೀತಿಯ ಸನ್ನಿವೇಶ ಬಂದರೆ ನಿಮ್ಮನ್ನು ನಾನೇ ಕರೆಯುತ್ತೇನೆ. ನಿಮ್ಮನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತೇನೆ” ಎಂದರು.
“ಕೆ. ಎಸ್. ರಂಗಪ್ಪ ಅವರೊಂದಿಗೆ ಪುಸ್ತಕ ಬಿಡುಗಡೆ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದೇನೆ. ಯಾರಿಂದ ಪುಸ್ತಕ ಬಿಡುಗಡೆ ಮಾಡಿಸಬೇಕು? ಎಂಬುವುದರ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ಇದರ ಹೊರತು ಯಾವುದೇ ರಾಜಕೀಯ ಉದ್ದೇಶದಿಂದ ಮೈಸೂರಿಗೆ ಬಂದಿಲ್ಲ” ಎಂದು ತಿಳಿಸಿದರು.
“ಮೈಸೂರು ಭೇಟಿಗೆ ಯಾವುದೇ ವಿಶೇಷತೆ ಇಲ್ಲ. ವೈಯಕ್ತಿಕ ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ ಹೊರತು, ಬೇರೆ ಯಾವ ರಾಜಕೀಯ ವಿಚಾರ ಮಾತನಾಡುವುದಕ್ಕೂ ನಾನು ಬಂದಿಲ್ಲ” ಎಂದು ದೇವೇಗೌಡರು ಸ್ಪಷ್ಟಪಡಿಸಿದರು