“ಕಿಚ್ಚ ಬಚ್ಚಾ” ಎಂದು ಒದೆ ತಿಂದ ದರ್ಶನ್ ಫ್ಯಾನ್!

Date:

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಫ್ಯಾನ್ ವಾರ್ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಫೇಕ್ ಐಡಿ ಗಳನ್ನು ಕ್ರಿಯೇಟ್ ಮಾಡಿ ಕೊಂಡು ಇತರ ನಟರನ್ನು ನಿಂದಿಸುತ್ತಾ ಕಾಲ ಕಳೆಯುವ ಕಿಡಿಗೇಡಿಗಳು ಇದೀಗ ಆಫ್ ಲೈನ್ ನಲ್ಲಿಯೂ ಸಹ ಇತರ ನಟರಿಗೆ ಬಯ್ಯುವುದನ್ನು ಶುರುಮಾಡಿಕೊಂಡು ಬಿಟ್ಟಿದ್ದಾರೆ.

 

 

ಇದಕ್ಕೆ ಉದಾಹರಣೆ ರಾಬರ್ಟ್ ಬಿಡುಗಡೆ ದಿನ ನಡೆದ ಈ ಒಂದು ಘಟನೆಯೇ ಸಾಕ್ಷಿ. ಹೌದು ರಾಬರ್ಟ್ ಬಿಡುಗಡೆಯ ದಿನ ದರ್ಶನ್ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕುಣಿದು ಕುಪ್ಪಳಿಸುತ್ತಿದ್ದರು ಇದೇ ವೇಳೆ ಡೈಲಾಗ್ ಹೇಳುವ ಭರದಲ್ಲಿ ದರ್ಶನ್ ಅಭಿಮಾನಿಯೊಬ್ಬ “ಕಿಚ್ಚ ಒಬ್ಬ ಲುಚ್ಚಾ ಡಿ ಬಾಸ್ ಮುಂದೆ ಬಚ್ಚಾ” ಎಂದು ಕೂಗಿದ್ದ. ಈತ ಹೇಳಿದ್ದ ಈ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಇದನ್ನು ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಆತನನ್ನ ಹಿಡಿದು ಸರಿಯಾಗಿ ಪಾಠ ಕಲಿಸಿದ್ದಾರೆ.

 

 

ಆತ ಸಿಕ್ಕ ಕೂಡಲೇ ಸರಿಯಾಗಿ ಕ್ಲಾಸ್ ತೆಗೆದುಕೊಂಡು ಎಲ್ಲರ ಮುಂದೆ ವಿಡಿಯೋ ಮಾಡಿ ಆತನಿಂದ ಕಿಚ್ಚ ಸುದೀಪ್ ಮತ್ತು ಅಭಿಮಾನಿಗಳ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ. ಜೋಶ್ ನಲ್ಲಿ ಕಿಚ್ಚ ಸುದೀಪ್ ಗೆ ಬಚ್ಚಾ ಎಂದಿದ್ದ ಆತ ಕೊನೆಯಲ್ಲಿ ಸುದೀಪ್ ಸರ್ ಮತ್ತು ಅವರ ಅಭಿಮಾನಿಗಳಿಗೆ ಸಾರಿ ಎಂದು ಸಪ್ಪೆ ಮುಖ ಹಾಕಿಕೊಂಡು ಮನೆಗೆ ನಡೆದ.. ನಿಮ್ಮ ನಟರ ಮೇಲಿನ ಅಭಿಮಾನ ಬೇರೆ ನಟರ ಮೇಲೆ ದ್ವೇಷಕ್ಕೆ ತಿರುಗಬಾರದು ಎನ್ನೋದು ಇದಕ್ಕೇ..

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...