ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಪೈಲ್ವಾನ್ ಸಿನಿಮಾ 5 ಭಾಷೆಗಳಲ್ಲಿ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ. ಕೋಟಿಗೊಬ್ಬ 3 ಕೂಡ ರೆಡಿಯಾಗ್ತಿದೆ. ಅಕ್ಟೋಬರ್ 2ಕ್ಕೆ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಬರಲಿದೆ. ಈ ಸಿನಿಮಾದಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ದಬಾಂಗ್-3ನಲ್ಲೂ ನಟಿಸಿದ್ದಾರೆ.
ಸುದೀಪ್ ಕನ್ನಡ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್ ಜೊತೆ ಜೊತೆಗೆ ಹಾಲಿವುಡ್ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ. ರಂಗಿತರಂಗ ಡೈರೆಕ್ಟರ್ ಅನೂಪ್ ಬಂಡಾರಿ ಜೊತೆ ಬಿಲ್ಲಾ ರಂಗ ಭಾಷ ಸಿನಿಮಾ ಮಾಡಲಿದ್ದಾರೆ. ಈ ಎಲ್ಲಾ ಸಿನಿ ಸುದ್ದಿಗಳ ನಡುವೆ ಜೋಗಿ ಪ್ರೇಮ್ ಮತ್ತು ಸುದೀಪ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ. ಸುದೀಪ್ ಮತ್ತು ಪ್ರೇಮ್ ಮತ್ತೆ ಒಂದಾಗಲಿದ್ದಾರೆ.
ಪ್ರೇಮ್ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅವರನ್ನು ಸೇರಿಸಿಕೊಂಡು ದಿ ವಿಲನ್ ಸಿನಿಮಾ ಮಾಡಿದ್ದರು.. ವಿಲನ್ ಒಂದು ರೇಂಜಿಗೆ ಹಿಟ್ ಆಗಿದ್ದು ಈಗ ಮತ್ತೆ ಸುದೀಪ್ ಮತ್ತು ಪ್ರೇಮ್ ಕಾಂಬಿನೇಷನ್ನಲ್ಲಿ ಸಿನಿಮಾ ಬರಲಿದೆ. ಏಕ್ ಲವ್ ಯಾ ಸಿನಿಮಾದಲ್ಲಿ ಪ್ರೇಮ್ ಬ್ಯುಸಿ ಇದ್ದಾರೆ. ಏಕ್ ಲವ್ ಯಾ ಮುಗಿದ ಮೇಲೆ ಈ ಸುದೀಪ್ ಮೂವಿಯನ್ನು ಪ್ರೇಮ್ ಕೈಗೆತ್ತಿಕೊಳ್ಳಲಿದ್ದಾರೆ.
ಬಾದ್ ಷಾ ಸುದೀಪ್ ಮತ್ತು ಪ್ರೇಮ್ ಜೋಡಿ ಮ್ಯಾಜಿಕ್ ಮಾಡಲು ರೆಡಿಯಾಗಿದ್ದು ಬಿಗ್ ಬಜೆಟ್ ಮೂವಿ ಎನ್ನಲಾಗಿದೆ. ಇನ್ನು ಪೈಲ್ವಾನ್ ಬಹು ಭಾಷೆಯಲ್ಲಿ ಬರುತ್ತಿರುವುದಲ್ಲದೆ , ಕನ್ನಡದಲ್ಲಿ ಪ್ಯಾನ್ ಇಂಡಿಯಾ ಮೂವಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸುದೀಪ್ -ಪ್ರೇಮ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗುವ ನಿರೀಕ್ಷೆಯಿದೆ.
ಸುದೀಪ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.. ಪ್ರೇಮ್ ಕೂಡ ಸುದೀಪ್ ಗೆ ಮತ್ತೊಂದು ಸಿನಿಮಾ ಮಾಡ ಸೆಟ್ಟೇರುತ್ತಿರುವುದು ಸುದೀಪ್ ಅಭಿಮಾನಿಗಳಿಗೆ ಹಬ್ಬ..