ಕಿರಿಕ್ ಚೆಲುವೆಗೆ ಅದೆಂಥಾ ಆಫರ್ ಬಂದಿದೆ ಗೊತ್ತಾ?

Date:

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ರಶ್ಮಿಕಾ ಮಂದಣ್ಣ ಅಂದ್ರೆ ಸಾಕು ಪಡ್ಡೆ ಹುಡುಗರಿಗೆ ಅದೇನೋ ಪುಳಕವಾಗುತ್ತೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ಚೆಂದುಳ್ಳಿ ಚೆಲುವೆ ಈಕೆ. ಯಾವಾಗ ಕರ್ನಾಟಕದ ಕ್ರಶ್ ಆದ್ರೋ ಆಗ್ಲೇ ಟಾಲಿವುಡ್, ಕಾಲಿವುಡ್ , ಹಾಗೇ ಬಾಲಿವುಡ್ ಅಂಗಳಕ್ಕೂ ಕಾಲಿಡೋದ್ರಲ್ಲಿ ನೋ ಡೌಟ್ ಅಂತಾ ಗಾಸಿಪ್ಗಳು ಹರಿದಾಡಿದ್ವು. ಕಿರಿಕ್ ಪಾರ್ಟಿ ಚಿತ್ರದ ನಂತರ ಈಗಾಗ್ಲೇ ಬಹುಬಾಷ ಸಿನಿಮಾಗಳಿಗೆ ಕಾಲಿಟ್ಟು ಮಿಂಚು ಹರಿಸಿರೋ ರಶ್ಮಿಕಾ, ಬಾಲಿವುಡ್ಗೂ ಅಂಗಳಕ್ಕೂ ಕಾಲಿಡುವುದು ಕನ್ಫರ್ಮ್ ಎನ್ನಲಾಗ್ತಿದೆ. ಯಾಕಂದ್ರೆ ರಶ್ಮಿಕಾಗೆ ಈಗ ಬಾಲಿವುಡ್ನಲ್ಲೂ ನಟಿಸುವ ಅವಕಾಶ ಒದಗಿ ಬಂದಿದೆಯಂತೆ.

ಬಿಟೌನ್ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ ಎನ್ನಲಾಗುತ್ತಿದೆ. ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡಬೇಕಾಗಿದೆಯಷ್ಟೇ. ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದ್ರೆ ಇದೊಂದು ಥ್ರಿಲ್ಲರ್ ಕತೆಯ ಸಿನಿಮಾ ಎನ್ನಲಾಗಿದೆ.
ಆದ್ರೀಗ ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ಜೊತೆ ಬಿಗ್ ಸ್ಕ್ರೀನ್ನಲ್ಲಿ ಮೋಡಿ ಮಾಡಿದ್ದ ರಶ್ಮಿಕಾಗೆ ಬಿಟೌನ್ನಲ್ಲಿಯಾರು ಹೀರೋ ಆಗ್ತಾರೆ ಅನ್ನೋದು ಸಹಜವಾಗೇ ಕ್ಯೂರಿಯಾಸಿಟಿ ಹೆಚ್ಚಿಸಿದೆ. ರಶ್ಮಿಕಾಗೆ ಈ ಚಿತ್ರದಲ್ಲಿ ಬಾಲಿವುಡ್ನ ಸಕ್ಸಸ್ಫುಲ್ ಹೀರೋ ರಣದೀಪ್ ಹೂಡ ಅಂತಾ ಮಾತುಗಳು ಕೇಳಿ ಬರ್ತಿವೆ. ಒಂದು ವೇಳೆ ಇವರಿಬ್ರು ಜೊತೆಯಾದ್ರೆ ಸ್ಕ್ರೀನ್ ಮೇಲೆ ಈ ಪೇರ್ ನೋಡೋಕೆ ರಶ್ಮಿಕಾ ಫ್ಯಾನ್ಸ್ಗಂತೂ ಹಬ್ಬ.

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...