ಮಹೇಶ್ ಬಾಬು ಅವರ ಬಹುನಿರೀಕ್ಷಿತ ಹಾಗೂ 26 ನೇ ಸಿನಿಮಾದಲ್ಲಿ ನಟಿಸಲು ನಟಿ ಸಾಯಿಪಲ್ಲವಿಗೆ ಆಹ್ವಾನ ನೀಡಲಾಗಿತ್ತು.
ಆದರೆ ಮಹೇಶ್ ಬಾಬು ಅವರ ಅಭಿಮಾನಿಗಳ ಟ್ರೋಲ್ ನಿಂದಬೇಸತ್ತ ಸಾಯಿಪಲ್ಲವಿ, ಚಿತ್ರಕ್ಕ ನೋ ಎಂದಿದ್ದಾರೆ. ಇದಾದ ಬಳಿಕ ಇದೀಗ ಸಾಯಿಪಲ್ಲವಿ ನಿರ್ಗಮನವಾಗಿದ್ದರಿಂದ ಆ ಜಾಗಕ್ಕೆ ಮತ್ತೊಬ್ಬ ಹಿರೋಯಿನ್ ನ ಹುಡುಕಾಟದಲ್ಲಿ ತೊಡಗಿರುವ ನಿರ್ಮಾಪಕರು, ರಶ್ಮಿಕಾ ಮಂದಣ್ಣ ಅವರನ್ನು ಅಪ್ರೋಚ್ ಮಾಡಿದ್ದರು.
ಅಚ್ಚರಿ ಎಂಬಂತೆ ಇದೀಗ ‘ಗೀತ ಗೋವಿಂದಂ’ ನಟಿ ಚಿತ್ರಕ್ಕೆ ನೋ ಎಂದಿದ್ದಾರೆ.ರಶ್ಮೀಕಾ ಕೈಯಲ್ಲಿ ಬಹಳಷ್ಟು ಸಿನಿಮಾಗಳಿದ್ದು, ಕನ್ನಡ ಹಾಗೂ ತೆಲುಗು ಎರಡು ಚಿತ್ರರಂಗದಿಂದಲ್ಲೂ ಬಹಳಷ್ಟು ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿದ್ದು ಹೀಗಾಗಿ ಮಹೇಶ್ ಬಾಬು ಅವರ 26ನೇ ಚಿತ್ರಕ್ಕ ಸಮಯ ಹೊಂದಿಸಲು ನಟಿಗೆ ಸಾಧ್ಯವಾಗುತ್ತಿಲ್ಲವಂತೆ. ಹೀಗಾಗಿ ಅವರು ಮಹೇಶ್ ಬಾಬುಗೆ ನೋ ಎಂದಿದ್ದಾರೆ ಎನ್ನಲಾಗುತ್ತಿದೆ