ಕುಂಭಮೇಳ ಯಾವತ್ತು? ಏನಿದರ ಮಹತ್ವ?

0
30

2021 ರಲ್ಲಿ, ಕುಂಭ ಮೇಳವು ಧರ್ಮನಗರಿಯಾದ ಹರಿದ್ವಾರದಲ್ಲಿ ನಡೆಯಲಿದೆ. ಜನವರಿ 14 ರಂದು, ಗುರುವಾರ ಸೂರ್ಯನು ಮಕರ ರಾಶಿಗೆ ಸಂಚಾರವನ್ನು ಮಾಡಿದ ನಂತರ ಮಾಹಾ ಕುಂಭಮೇಳವನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕುಂಭ ಸ್ನಾನ ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದ್ದು, ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಲು ಧರ್ಮನಗರಿಗೆ ಬರುತ್ತಾರೆ. 2020 ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಕುಂಭವು ಅರ್ಧ ಕುಂಭವಾಗಿತ್ತು, ಆದರೆ ಈ ಬಾರಿ ಶತಮಾನದ ಪೂರ್ಣ ಕುಂಭವು ನಡೆಯಲಿದೆ. ಪ್ರತಿ 6 ವರ್ಷಗಳಿಗೊಮ್ಮೆ ಅರ್ಧ ಕುಂಭ ಮತ್ತು 11 ವರ್ಷಗಳಿಗೊಮ್ಮೆ ಮಹಾಕುಂಭ ಬರುತ್ತದೆ. ಪ್ರತಿ 11 ವರ್ಷಗಳ ನಂತರ ಕುಂಭ ಮೇಳವನ್ನು ಯಾಕೆ ನಡೆಸಲಾಗುತ್ತದೆ ಮತ್ತು ಅದರ ಹಿಂದಿನ ರಹಸ್ಯವೇನು..? ತಪ್ಪದೇ ತಿಳಿದುಕೊಳ್ಳಿ.

ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಗಳ ಪ್ರಕಾರ, ಈ ಬಾರಿ ಕುಂಭ ಮೇಳವನ್ನು 12 ವರ್ಷಗಳಿಗೊಮ್ಮೆ ಆಚರಿಸುವ ಬದಲು 11 ನೇ ವರ್ಷದಲ್ಲೇ ಆಯೋಜಿಸಲಾಗುತ್ತಿದೆ. ಈ ಬಾರಿ ಸೂರ್ಯ ಮತ್ತು ದೇವರುಗಳ ಗುರವಾದ ಬೃಹಸ್ಪತಿಯ ಸಂಯೋಗದಿಂದ ಕೇವಲ ನಾಲ್ಕು ರಾಜ ಸ್ನಾನಗಳು ಇರುತ್ತವೆ. ಈ ಸ್ನಾನಗಳಲ್ಲಿ, ನಿರ್ವಾಣಿಗಳು, ಸಾಧು – ಸಂತರು ಬಂದು ಸ್ನಾನವನ್ನು ಮಾಡುತ್ತಾರೆ. ಹಾಗೂ ಹೊಸ ಸದಸ್ಯರನ್ನು ಈ ದಿನ ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಾರೆ. ಕುಂಭಮೇಳವು ಹಿಂದೂಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಮತ್ತು ಈ ಜಾತ್ರೆಯ ಸಿದ್ಧತೆಗಳು ಮಕರ ಸಂಕ್ರಾಂತಿಗೂ ಒಂದು ತಿಂಗಳ ಮುಂಚಿತವಾಗಿ ಪ್ರಾರಂಭವಾಗುತ್ತವೆ.

LEAVE A REPLY

Please enter your comment!
Please enter your name here