ಕುಮಾರಣ್ಣ ದರ್ಶನ್ ಗೆ ಬೈದಾಗ ಸುಮ್ಮನಿದ್ರು ಡಿ ಫ್ಯಾನ್ಸ್!!

Date:

ಜಗ್ಗೇಶ್ ಅವರು ಆಡಿಯೋ ಒಂದರಲ್ಲಿ ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಜಗ್ಗೇಶ್ ಅವರ ತೋತಾಪುರಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಅವರಿಗೆ ಮುತ್ತಿಗೆ ಹಾಕಿದ್ದರು. ಅಷ್ಟೇ ಅಲ್ಲದೆ ಹಿರಿಯ ನಟ ಎಂಬುದನ್ನು ನೋಡದೆ ಏಕವಚನದಲ್ಲಿ ಜಗ್ಗೇಶ್ ಅವರಿಗೆ ಅವಾಜ್ ಹಾಕಿದ ಆ ಕೆಲ ದರ್ಶನ್ ಅಭಿಮಾನಿಗಳು ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು.

 

 

ಇನ್ನೂ ಕೆಲ ದರ್ಶನ್ ಅಭಿಮಾನಿಗಳು ಮಾಡಿದ ಈ ಕೆಲಸದ ನಂತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ನಮ್ಮ ಬಾಸ್ ವಿರುದ್ಧ ಯಾರು ಏನೇ ಮಾತನಾಡಿದರೂ ಸರಿ ಅವರನ್ನು ಬಿಡುವುದಿಲ್ಲ , ಅವರಿಗೆ ತಕ್ಕಪಾಠ ಕಲಿಸಿಯೇ ನಾವು ಸುಮ್ಮನಾಗುವುದು ಎಂದು ಕೆಲ ದರ್ಶನ್ ಅಭಿಮಾನಿಗಳು ಮಾತನಾಡತೊಡಗಿದ್ದಾರೆ.

 

 

ಆದರೆ ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ನಡೆಸಿದ್ದ ದರ್ಶನ್ ಅವರ ಬಗ್ಗೆ ಜೆಡಿಎಸ್ ನ ಕೆಲ ನಾಯಕರು ಇದೇ ರೀತಿ ಮಾತನಾಡಿದ್ದರು. ದರ್ಶನ್ ಅವರ ಫ್ಯಾಮಿಲಿ ಮತ್ತು ದರ್ಶನ್ ಅವರ ಬಗ್ಗೆ ಮಂಡ್ಯ ಚುನಾವಣೆ ವೇಳೆ ಕೆಲವೊಂದಿಷ್ಟು ಮಂದಿ ಕೆಟ್ಟದಾಗಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಯಾವೊಬ್ಬ ದರ್ಶನ್ ಅಭಿಮಾನಿಗಳು ಸಹ ಜಗ್ಗೇಶ್ ಅವರನ್ನ ಕೇಳಿದ ರೀತಿ ಹೋಗಿ ಆ ರಾಜಕಾರಣಿಗಳನ್ನು ಕೇಳುವ ಪ್ರಯತ್ನವನ್ನು ಮಾಡಲೇ ಇಲ್ಲ.

 

ಏಕೆಂದರೆ ಆ ರಾಜಕಾರಣಿಗಳಿಗೆ ದೊಡ್ಡ ಮಟ್ಟದ ಬ್ಯಾಕ್ ಗ್ರೌಂಡ್ ಇದೆ.. ಹೀಗಾಗಿ ಅವರನ್ನು ಕೇಳುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ ಆದರೆ ಜಗ್ಗೇಶ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇಲ್ಲ ಹೀಗಾಗಿ ಅವರ ಮೇಲೆ ಎಗರಾಡಿದರೆ ನಮ್ಮನ್ನ ಯಾರೂ ಕೇಳುವುದಿಲ್ಲ ಎಂದು ಈ ರೀತಿ ಮಾಡಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆ ದರ್ಶನ್ ಅಭಿಮಾನಿಗಳ ಕಾಲನ್ನು ಎಳೆಯುತ್ತಿದ್ದಾರೆ.

 

 

ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ತೆರೆದ ವೇದಿಕೆಯಲ್ಲಿ ದರ್ಶನ್ ಅವರನ್ನು ಅದು ಯಾವನ್ರಿ ಅವನು ಡಿ ಬಾಸ್ ಅಂತೆ ಡಿ ಬಾಸ್ ಅಂತ ಕೇವಲವಾಗಿ ಮಾತಾಡಿದ್ದರು. ಸಾಗರದಂತೆ ನೆರೆದಿದ್ದ ಜನರ ಮುಂದೆ ಕುಮಾರಸ್ವಾಮಿ ಅವರು ಏಕವಚನದಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿದರೂ ಸಹ ಯಾವೊಬ್ಬ ದರ್ಶನ್ ಅಭಿಮಾನಿಯೂ ಕುಮಾರಸ್ವಾಮಿ ಅವರ ಬಳಿ ಹೋಗಿ ನಿಲ್ಲುವ ಧೈರ್ಯ ಮಾಡಲಿಲ್ಲ. ಇನ್ನೂ ಇದನ್ನ ಇಟ್ಟುಕೊಂಡು ಇದೀಗ ಜಗ್ಗೇಶ್ ಅವರ ಮೇಲಿನ ದರ್ಶನ್ ಅಭಿಮಾನಿಗಳ ಮುತ್ತಿಗೆಯನ್ನು ವಿರೋಧಿಸುವವರು ದರ್ಶನ್ ಅಭಿಮಾನಿಗಳ ಕಾಲನ್ನು ಎಳೆಯುತ್ತಿದ್ದಾರೆ.

 

 

ಜಗ್ಗೇಶ್ ಅವರನ್ನು ಕೇಳಿದ ರೀತಿ ಈ ಹಿಂದೆ ಕುಮಾರಸ್ವಾಮಿ ಅವರು ನಿಮ್ಮ ಬಾಸ್ ಬಗ್ಗೆ ಏಕವಚನದಲ್ಲಿ ಮಾತನಾಡಿದಾಗ ಯಾಕೆ ಕೇಳಲಿಲ್ಲ? ಅವರನ್ನು ಎದುರಿಸುವ ಧೈರ್ಯ ಇಲ್ಲವಾ? ಯಾರು ಮಾತನಾಡಿದರೂ ಸುಮ್ಮನೆ ಬಿಡುವುದಿಲ್ಲ ಎನ್ನುವವರು ಕುಮಾರಸ್ವಾಮಿ ಅವರನ್ನು ಯಾಕೆ ಸುಮ್ಮನೆ ಬಿಟ್ಟಿರಿ? ಮಂಡ್ಯ ಚುನಾವಣೆ ವೇಳೆ ಜೆಡಿಎಸ್ ನ ಹಲವಾರು ಕಾರ್ಯಕರ್ತರು ದರ್ಶನ್ ಅವರ ವಿರುದ್ಧ ಏಕವಚನದಲ್ಲಿಯೇ ಮಾತನಾಡಿದರು ಆಗ ನೀವು ಎಲ್ಲಿದ್ರಿ ಎಂದು ದರ್ಶನ್ ಅಭಿಮಾನಿಗಳ ಕಾಲನ್ನು ಎಳೆಯ ತೊಡಗಿದ್ದಾರೆ ನೆಟ್ಟಿಗರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...