ಕುಮಾರಸ್ವಾಮಿಯೇ ನಾಗಮಂಗಲ ಗಲಾಟೆ ಮಾಡಿಸಿರಬಹುದು: DKಸುರೇಶ್
ಬೆಂಗಳೂರು: ಕುಮಾರಸ್ವಾಮಿಯೇ ನಾಗಮಂಗಲ ಗಲಾಟೆ ಮಾಡಿಸಿರಬಹುದು ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿಯೇ ನಾಗಮಂಗಲ ಗಲಾಟೆ ಮಾಡಿಸಿರಬಹುದು. ಪ್ರತಿ ವಾರ ಇಲ್ಲಿಗೆ ಬರುತ್ತಾರಲ್ಲ, ಹಾಗೆ ಗಲಾಟೆ ಮಾಡಿಸಿರಬಹುದು.
ಮುಸ್ಲಿಮನಾಗಿ ಹುಟ್ಟಬೇಕು ಅಂತಾ ಹೇಳುತ್ತಿದ್ದವನು ನಾನಲ್ಲ. ಹೆಚ್. ಡಿ.ಕುಮಾರಸ್ವಾಮಿ ನಿತ್ಯ ಒಂದೊಂದು ಹೇಳಿಕೆ ಕೊಡುತ್ತಾರೆ. ಹಿಂದೆ ಗಲಭೆಗಳಾದಾಗ ಅಮಿತ್ ಶಾ, ಪ್ರಧಾನಿ ಮೋದಿ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದರು ಎಂದು ತಿಳಿಸಿದರು.
ಇನ್ನೂ ಬಿಜೆಪಿ ಶಾಸಕ ಮುನಿರತ್ನ ಅವರು ದಲಿತ ಸಮುದಾಯಕ್ಕೆ ಕೀಳು ಪದಗಳಿಂದ ಸಂಬೋಧನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂದರು.