ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ತಮ್ಮನ್ನು ತಾವು ಅರ್ಜುನ ಎಂದು ಪರೋಕ್ಷವಾಗಿ ಕರೆದುಕೊಂಡಿದ್ದಾರೆ.
ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರ ನಾಮಪತ್ರ ಸಲ್ಲಿಕೆಯ ನಂತರ ಬೃಹತ್ ಸಮಾವೇಶ ನಡೆಯಿತು. ಆ ಸಮಾವೇಶದಲ್ಲಿ ನಿಖಿಲ್ ಪರ ಮತ ಯಾಚನೆ ಮಾಡಿದರು.
ಈ ವೇಳೆ ತನ್ನ ಮಗ ನಟಿಸಿರುವ ‘ಕುರುಕ್ಷೇತ್ರ’ ನಟಿಸಿರುವುದನ್ನು ಪ್ರಸ್ತಾಪ ಮಾಡಿ ಮಗ ಕುರುಕ್ಷೇತ್ರದಲ್ಲಿ ಅಭಿಮನ್ಯು . ಇತಿಹಾಸದಂತೆಯೇ ಸಿನಿಮಾದಲ್ಲೂ ಅಭಿಮನ್ಯು ಚಕ್ರವ್ಯೂಹ ಬೇಧಿಸಲು ಆಗಿಲ್ಲ. ಆದರೆ, ಮಂಡ್ಯ ಕುರುಕ್ಷೇತ್ರದಲ್ಲಿ ನನ್ನ ಮಗ ಚಕ್ರವ್ಯೂಹ ಬೇಧಿಸಿಯೇ ಬೇಧಿಸುತ್ತಾನೆ. ಅಲ್ಲಿ ತಂದೆ ಅರ್ಜುನ ಜೊತೆಗಿರಲಿಲ್ಲ. ಇಲ್ಲಿ ಮಗನ ಜೊತೆ ನಾನು ಇದ್ದೇನೆ ಎಂದರು.
ಮಾತನಾಡುತ್ತಾ ಸುಮಲತಾ ಅವರ ಮೇಲೂ ವಾಗ್ದಾಳಿ ನಡೆಸಿದರು. ದರ್ಶನ್ ಮತ್ತು ಯಶ್ ಅವರ ಜೋಡೆತ್ತು ಘೋಷಣೆಗೆ ತಿರುಗೇಟು ನೀಡಿದ ಸಿಎಂ ನಿಜವಾದ ಜೋಡೆತ್ತುಗಳು ನಾನು ಮತ್ತು ಡಿ.ಕೆ ಶಿವಕುಮಾರ್ ಎಂದು ಹೇಳಿದರು.
ಒಟ್ಟಿನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ನಿಖಿಲ್ ಮತ್ತು ಸುಮಲತಾ ಅವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮಾತಿಗೆ ಮಾತು , ತಿರುಗೇಟಿನ ಸಮರ ತಾರಕಕ್ಕೇರುತ್ತಿದೆ.
ಕುಮಾರಸ್ವಾಮಿ ತಮ್ಮನ್ನು ತಾವು ಅರ್ಜುನ ಎಂದು ಕರೆದುಕೊಂಡಿದ್ದು ಯಾಕೆ?
Date: