ಕಾಂಗ್ರೆಸ್ ನಾಯಕರಿಗೀಗ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣು ಬಿದ್ದಿದೆ. ಹೆಚ್.ಡಿ ಕುಮಾರಸ್ವಾಮಿ ಅವರು ನಂತರ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕೂರುತ್ತಾರೆಯೇ? ಡಿ.ಕೆ ಶಿವಕುಮಾರ್ ಕೂರುತ್ತಾರೆಯೇ? ಅಥವಾ ಎಂ.ಬಿ ಪಾಟೀಲ್ ಕೂರುತ್ತಾರೆಯೇ ಎಂಬುದು ಕಾಂಗ್ರೆಸ್ನೊಳಗಿರುವ ಪ್ರಶ್ನೆ..!
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ನಾನು ಮುಖ್ಯಮಂತ್ರಿ ಪಟ್ಟ ಅಲಂಕರಿಸುವ ಹೆಬ್ಬಯಕೆಯನ್ನು ಹೇಳಿಕೊಂಡಿದ್ದಾರೆ. ನಾನು ಮತ್ತೆ ಮುಖ್ಯಮಂತ್ರಿಯಾದರೆ 10 ಕೆಜಿ ಅಕ್ಕಿ ಕೊಡುತ್ತೇನೆ. ಯಾರೂ ಉಪವಾಸ ಇರಬಾರದು ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಹೇಳಕೆ ಬೆನ್ನಲ್ಲಿಯೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಆಸೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈಗ ಗೃಹಸಚಿವ ಎಂಬಿ ಪಾಟೀಲ್ ಅವರ ಸರದಿ. ಸಿದ್ದರಾಮಯ್ಯ ಅವರ ಬಳಿಕ ಮುಖ್ಯಮಂತ್ರಿ ರೇಸ್ನಲ್ಲಿರುವುದು ನಾನು. ಸಿಎಂ ಆಗುವುದು ನನ್ನ ಆಸೆ.. ದುರಾಸೆಯಲ್ಲ ಎಂದು ಎಂಬಿಪಿ ವಿಜಯನಗರದಲ್ಲಿ ಇಂದು ಹೇಳಿದ್ದಾರೆ.
ಕುಮಾರಸ್ವಾಮಿ ನಂತ್ರ ಸಿಎಂ ಆಗುವುದು ಸಿದ್ದರಾಮಯ್ಯ ಅವರಾ? ಡಿಕೆಶಿನಾ? ಅಥವಾ ಎಂಬಿಪಿನಾ?
Date: