ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಎಷ್ಟು ಸಾಲ ಮಾಡಿದ್ದಾರೆಂಬುದನ್ನು ಬಹಿರಂಗಗೊಳಿಸಲಿ, ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ, ಮೊದಲು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ ನಂತರ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡಲಿ ಎಂದರು. ಈಗಾಗಲೇ ಕೇಂದ್ರ ಸರ್ಕಾರ ನೆರೆಗಾಗಿ ಮೊದಲ ಕಂತಿನ ಹಣ ಬಿಡುಗಡೆ ಮಾಡಿದ್ದು, ಸಧ್ಯದಲ್ಲೆ ಮತ್ತೊಂದು ಕಂತಿನ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಲೂಗಡ್ಡೆಯಿಂದ ಶ್ರೀಮಂತರಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿಯವರು ನಮ್ಮ ಊರಿಗೆ ಬಂದು ನೋಡಲಿ ಯಾರು ರೈತನ ಮಗಳು ಎಂಬುದು ತಿಳಿಯುತ್ತದೆ. ಚಾರ್ವಾಕ ಎಲ್ಲಿ ಬರುತ್ತದೆ ಎಂದು ಮೊದಲು ತಿಳಿದುಕೊಳ್ಳಲಿ.